ಇಮ್ರಾನ್ ಖಾನ್ ಪ್ರಮಾಣ ವಚನದ ವೇಳೆ ಸಿಧು ಆಲಂಗಿಸಿದ ಪಾಕ್ ಸೇನಾ ಮುಖ್ಯಸ್ಥರು ಹೇಳಿದ್ದೇನು ಗೊತ್ತಾ?

ನಿನ್ನೆ ಇಸ್ಲಾಮಾಬಾದ್ ನಲ್ಲಿ ಇಮ್ರಾನ್ ಖಾನ್ ಪ್ರಮಾಣವಚನ ಕಾರ್ಯಕ್ರಮಕ್ಕೆ ತೆರಳಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರಿಗೆ ವಿಶಿಷ್ಯ ಅನುಭವವಾಗಿದೆಯಂತೆ..
ಸಿಧುರನ್ನು ಬರಮಾಡಿಕೊಂಡಿದ್ದ ಜನರಲ್ ಬಜ್ವಾ
ಸಿಧುರನ್ನು ಬರಮಾಡಿಕೊಂಡಿದ್ದ ಜನರಲ್ ಬಜ್ವಾ
Updated on
ನವದೆಹಲಿ: ನಿನ್ನೆ ಇಸ್ಲಾಮಾಬಾದ್ ನಲ್ಲಿ ಇಮ್ರಾನ್ ಖಾನ್ ಪ್ರಮಾಣವಚನ ಕಾರ್ಯಕ್ರಮಕ್ಕೆ ತೆರಳಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರಿಗೆ ವಿಶಿಷ್ಯ ಅನುಭವವಾಗಿದೆಯಂತೆ..
ಹೌದು.. ಪಾಕಿಸ್ತಾನದ ನೂತನ ಪ್ರಧಾನಿಯಾಗಿ ನಿನ್ನೆ ಮಾಜಿ ಕ್ರಿಕೆಟಿಗ ಹಾಗೂ ಪಿಟಿಐ ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ಭಾರತದಿಂದ ಕಪಿಲ್ ದೇವ್, ಸುನಿಲ್ ಗವಾಸ್ಕರ್ ಮತ್ತು ನವಜೋತ್ ಸಿಂಗ್ ಸಿಧು ಅವರಿಗೆ ಅಹ್ವಾನ ನೀಡಲಾಗಿತ್ತು. ಈ ಮೂವರ ಪೈಕಿ ಸಿಧು ಮಾತ್ರ ಕಾರ್ಯಕ್ರಮಕ್ಕೆ ತೆರಳಿದ್ದರು. 
ಪ್ರಮಾಣವಚನ ಕಾರ್ಯಕ್ರಮಕ್ಕೆ ತೆರಳಿದ್ದ ಸಿಧು ಅವರನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಅವರ ಸ್ವಾಗತಿಸಿದ್ದರು. ಅಲ್ಲದೆ ಸಿಧು ಅವರನ್ನು ಆಲಂಗಿಸಿಕೊಂಡು ಆತ್ಮೀಯವಾಗಿ ಬರ ಮಾಡಿಕೊಂಡರು. ಈ ವೇಳೆ ಸಿಧು ಮತ್ತು ಬಜ್ವಾ ಕೆಲ ಕ್ಷಣಗಳ ಕಾಲ ಮಾತನಾಡಿದ್ದು, ಇವರಿಬ್ಬರು ಏನು ಮಾತನಾಡಿದರು ಎಂಬ ಕುತೂಹಲ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಈ ಕುತೂಹಲಕ್ಕೆ ಸ್ವತಃ ಸಿಧು ತೆರೆ ಎಳೆದಿದ್ದು, ಬಜ್ವಾ ಹೇಳಿದ್ದೇನು ಎಂಬುದನ್ನು ವಿವರಿಸಿದ್ದಾರೆ.
ಕಾರ್ಯಕ್ರಮಕ್ಕೆ ತೆರಳಿದ ನನ್ನನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ಪ್ರಮಾಣ ವಚನ ಸ್ವೀಕಾರದ ಬಳಿಕ ನನ್ನ ಬಳಿ ಬಂದ ಬಜ್ವಾ ಆತ್ಮೀಯವಾಗಿ ಆಲಂಗಿಸಿಕೊಂಡು ನಾನು ಕ್ರಿಕೆಟರ್ ಆಗಬೇಕು ಎಂದುಕೊಂಡಿದ್ದ ಜನರಲ್ ಎಂದು ಹಾಸ್ಯ ಚಟಾಕಿ ಹಾರಿಸಿದರು. ಅಲ್ಲದೆ ನಮಗೆ ಭಾರತದೊಂದಿಗೆ ದ್ವಂದ್ವವಲ್ಲ ಶಾಂತಿ ಬೇಕು ಎಂದು ಹೇಳಿದರು ಎಂದು ಸಿಧು ಹೇಳಿದ್ದಾರೆ.
ಪ್ರಮಾಣ ವಚನ ಕಾರ್ಯಕ್ರಮಕ್ಕಾಗಿ ನಾನು ಪಾಕಿಸ್ತಾನಕ್ಕೆ ತೆರಳಿದ್ದು, ನಾನು ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯಾಗಿದೆ ಎಂದು ಸಿಧು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com