ಕೇರಳ ಪ್ರವಾಹ: ಕೊಚ್ಚಿ ನೌಕಾ ನೆಲೆಯಿಂದ ವಿಮಾನ ಸಂಚಾರ ಆರಂಭ

ಶತಮಾನದ ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳದಲ್ಲಿ ಮತ್ತೆ ವಿಮಾನ ಸಂಚಾರ ಆರಂಭವಾಗಿದೆ.
ಕೊಚ್ಚಿ ನೌಕಾ ನೆಲೆಯಿಂದ ವಾಣಿಜ್ಯ ವಿಮಾನ ಹಾರಾಟ
ಕೊಚ್ಚಿ ನೌಕಾ ನೆಲೆಯಿಂದ ವಾಣಿಜ್ಯ ವಿಮಾನ ಹಾರಾಟ
ಕೊಚ್ಚಿ: ಶತಮಾನದ ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳದಲ್ಲಿ ಮತ್ತೆ ವಿಮಾನ ಸಂಚಾರ ಆರಂಭವಾಗಿದೆ. 
ಭೀಕರ ನೆರೆಯಿಂದಾಗಿ ಸ್ಥಗಿತಗೊಂಡಿದ್ದ ಕೊಚ್ಚಿ ಅಂತಾರಾಷ್ಟ್ರ ವಿಮಾನ ನಿಲ್ದಾಣ ಸೇವೆಗಳು ಮತ್ತೆ ಪುನಾರಂಭಗೊಂಡಿದೆ. ಆದರೆ ವಿಮಾನಗಳು ಸಂಚರಿಸುತ್ತಿರುವುದ ಕೊಚ್ಚಿ ವಿಮಾನ ನಿಲ್ದಾಣದಿಂದಲ್ಲ. ಬದಲಿಗೆ ಕೊಚ್ಚಿ ನೌಕಾ ನೆಲೆಯಿಂದ.  ಯುದ್ಧ ವಿಮಾನ ವಾಹಕ ನೌಕೆ ಐಎಎನ್ ಎಸ್ ಗರುಡಾ ನೌಕಾ ನೆಲೆಯಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. 

ಇಂದು ಬೆಳಿಗ್ಗೆ ಐಎನ್ಎಸ್ ಗರುಡಾ ನೌಕಾ ನೆಲೆಯಲ್ಲಿ ಮೊದಲ ವಿಮಾನ ಇಂದು ಲ್ಯಾಂಡ್ ಆಗಿದೆ. ಆದರೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಸ್ಟ್ 26 ರ ವರೆಗೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಆದರೆ ಕೇರಳಕ್ಕೆ ತುರ್ತಾಗಿ ವಿಮಾನಗಳ ಹಾರಾಟದ ಅಗತ್ಯತೆ ಇದ್ದು, ಇದೇ ಕಾರಣಕ್ಕೆ ಐಎನ್ ಎಲ್ ಗರುಡಾ ನೌಕಾ ನೆಲೆ ಮೂಲಕ ವಿಮಾನಯಾನ ಹಾರಾಕ್ಕೆ ನೆರವಾಗಿದೆ. 
ಇನ್ನು ಕಳೆದ ಹತ್ತು ದಿನಗಳಿಂದ ಎಡೆಬಿಡದೇ ಕಾಡಿದ್ದ ಮಳೆ ಮತ್ತು ಪ್ರವಾಹದಿಂದಾಗಿ ಸುಮಾರು 200ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, 38 ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ. ಅಂತೆಯೇ ಒಟ್ಟು 3,734 ನಿರಾಶ್ರಿತ ಶಿಬಿರಗಳಲ್ಲಿ 8,46,680 ಮಂದಿ ಆಶ್ರಯ ಪಡೆದಿದ್ದಾರೆ. 
ಪ್ರಸ್ತುತ ಕೇರಳದಲ್ಲಿ ಮಳೆಯ ಅಬ್ಬರ ಕಡಿತವಾಗಿದ್ದು, 12 ಜಿಲ್ಲೆಗಳಲ್ಲಿ ಘೋಷಣೆ ಮಾಡಲಾಗಿದ್ದ ಕೆಂಪು ಅಲರ್ಟ್ ಅನ್ನು ಹಿಂದಕ್ಕೆ ಪಡೆಯಲಾಗಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ರಾಜಧಾನಿ ತಿರುವನಂತಪುರಂ, ಕೊಲ್ಲಂ ಮತ್ತು ಕಾಸರಗೋಡಿನಲ್ಲಿ ಆರೆಂಜ್ ಅಲರ್ಟ್ ಮುಂದುವರೆಸಲಾಗಿದೆ. 
ಅಂತೆಯೇ ಮಳೆ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ ಸಣ್ಣ ಪ್ರಮಾಣ ಮಳೆಯಾಗುವ ಕುರಿತು ಮುನ್ಸೂಚನೆ ನೀಡಿದೆ. ಕಳೆದ ಮೂರು ದಿನಗಳಿಂದೀಚೆಗೆ ಮಳೆ ಅಬ್ಬರ ಗಣನೀಯವಾಗಿ ತಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com