ಲೋಕ್ ಪಾಲ್ ಆಯ್ಕೆ ಸಮಿತಿ ಸಭೆಯಿಂದ ದೂರ ಉಳಿಯಲು ನಿರ್ಧರಿಸಿದ ಮಲ್ಲಿಕಾರ್ಜುನ ಖರ್ಗೆ

ಲೋಕ್ ಪಾಲ್ ಆಯ್ಕೆ ಸಮಿತಿ ಸಭೆ ಆ.21 ರಂದು ನಡೆಯಲಿದ್ದು, ಸಭೆಯಲ್ಲಿ ಭಾಗವಹಿಸದೇ ಇರಲು ಕಾಂಗ್ರೆಸ್ ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Updated on: 
ನವದೆಹಲಿ: ಲೋಕ್ ಪಾಲ್ ಆಯ್ಕೆ ಸಮಿತಿ ಸಭೆ ಆ.21 ರಂದು ನಡೆಯಲಿದ್ದು,  ಸಭೆಯಲ್ಲಿ ಭಾಗವಹಿಸದೇ ಇರಲು ಕಾಂಗ್ರೆಸ್ ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದ್ದಾರೆ. 
"ನನ್ನನ್ನು ವಿಶೇಷ ಆಹ್ವಾನಿತನ ಪಟ್ಟಿಗೆ ಸೇರಿಸಲಾಗಿದೆ. ಲೋಕ್ ಪಾಲ್ ಆಯ್ಕೆ ಸಮಿತಿಗೆ ಪೂರ್ಣಪ್ರಮಾಣದ ಸದಸ್ಯನನ್ನಾಗಿ ಪರಿಗಣಿಸುವವರೆಗೂ ನಾನು ಸಭೆಯಲ್ಲಿ ಭಾಗವಹಿಸುವುದಿಲ್ಲ" ಎಂದು ಖರ್ಗೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿರುವ ಖರ್ಗೆ,  ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷದ ಧ್ವನಿಯನ್ನು ಬಹಿಷ್ಕರಿಸುವುದು, ಸಂಸತ್ ನ್ನು ಬಹಿಷ್ಕರಿಸಿ ವಶಪಡಿಸಿಕೊಂಡಂತಾಗುತ್ತದೆ ಎಂದು ಹೇಳಿದ್ದಾರೆ. 
ನನ್ನನ್ನು ವಿಶೇಷ ಆಹ್ವಾನಿತನನ್ನಾಗಿ ಪರಿಗಣಿಸಿರುವುದರ ಬಗ್ಗೆ  ಈ ಹಿಂದೆಯೂ ಸರ್ಕಾರಕ್ಕೆ ಸಾಕಷ್ಟು ಬಾರಿ ಪತ್ರ ಬರೆದಿದ್ದೇನೆ, ಆದರೂ ಮತ್ತೆ ಅದೇ ಮುಂದುವರೆದಿದೆ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com