ಲೋಕಸಭಾ ಚುನಾವಣೆ 2019: ಗೆಲುವಿನ ರಣತಂತ್ರ ರಚನೆಗೆ 9 ನಾಯಕರ 'ಕೈ' ಸಮಿತಿ ರಚನೆ

2019ರ ಲೋಕಸಭಾ ಚುನವಾಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಶತಾಯಗತಾಯ ಗೆಲುವು ಸಾಧಿಸಬೇಕು ಎಂದು ಹೊರಟಿರುವ ಕಾಂಗ್ರೆಸ್ ಪಕ್ಷ ಚುನಾವಣಾ ರಣತಂತ್ರ ರಚನೆಗಾಗಿ 3 ಸಮಿತಿಗಳನ್ನು ರಚನೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: 2019ರ ಲೋಕಸಭಾ ಚುನವಾಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಶತಾಯಗತಾಯ ಗೆಲುವು ಸಾಧಿಸಬೇಕು ಎಂದು ಹೊರಟಿರುವ ಕಾಂಗ್ರೆಸ್ ಪಕ್ಷ ಚುನಾವಣಾ ರಣತಂತ್ರ ರಚನೆಗಾಗಿ 3 ಸಮಿತಿಗಳನ್ನು ರಚನೆ ಮಾಡಿದೆ.
ಹಿರಿಯ ಕಾಂಗ್ರೆಸ್ ಮುಖಂಡರಾದ ಎಕೆ ಆ್ಯಂಟನಿ, ಗುಲಾಂನಬಿ ಆಜಾದ್ ನೇತೃತ್ವದಲ್ಲಿ ಈ ಮೂರು ಸಮಿತಿಗಳನ್ನು ರಚನೆ ಮಾಡಲಾಗಿದ್ದು, ದೆಹಲಿಯಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ ಉನ್ನತ ಸಭೆಯಲ್ಲಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಪಾಲ್ಗೊಂಡು ಚರ್ಚೆ ನಡೆಸಿ ಈ ಮೂರು ಸಮಿತಿಗಳನ್ನು ರಚನೆ ಮಾಡಿದ್ದಾರೆ. 
ಕಾಂಗ್ರೆಸ್ ಪಕ್ಷದ ಅಧಿಕೃತ ಮೂಲಗಳ ಪ್ರಕಾರ ಎಕೆ ಆ್ಯಂಟನಿ ನೇತೃತ್ವದಲ್ಲಿ ಕೋರ್ ಕಮಿಟಿ, ಮನ್ ಪ್ರೀತ್ ಬಾದಲ್ ಅವರ ನೇತೃತ್ವದಲ್ಲಿ ಚುನಾವಣಾ ಪ್ರಣಾಳಿಕೆ ರಚನಾ ಸಮಿತಿ ಮತ್ತು ಭಕ್ತ್ ಚರಣದಾಸ್ ಅವರ ನೇಚತೃತ್ವದಲ್ಲಿ ಪ್ರಚಾರ ಸಮಿತಿಯನ್ನು ರಚನೆ ಮಾಡಲಾಗಿದೆ.
ಒಂಬತ್ತು ಸದಸ್ಯರನ್ನು ಒಳಗೊಂಡ ಕೋರ್‌ ಕಮಿಟಿಯಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಗುಲಾಬ್‌ ನಬಿ ಅಜಾದ್‌, ಮಲ್ಲಿಕಾರ್ಜುನ್‌ ಖರ್ಗೆ, ಎ.ಕೆ.ಆಟೋನಿ, ಅಶೋಕ್‌ ಹೆಲ್ಹೋಟ್‌, ಅಹಮದ್‌ ಪಟೇಲ್‌,  ರಮೇಶ್‌ ಜೈರಾಮ್‌, ರಣ್‌ದೀಪ್‌ ಸುರ್ಜಿವಾಲಾ, ಕೆ.ಸಿ.ವೇಣುಗೋಪಾಲ್ ‌ಇದ್ದಾರೆ.  ಇನ್ನೂ 19 ಸದಸ್ಯರನ್ನು ಒಳಗೊಂಡ ಪ್ರಣಾಳಿಕೆ ಸಮಿತಿಯಲ್ಲಿ ಪಿ.ಚಿದಂಬರಂ, ಸ್ಯಾಂಪಿತ್ರೋಡಾ, ಮನ್ ಪ್ರೀತ್‌ ಬಾದಲ್‌, ಸುಷ್ಮಿತಾ ದೇವ್‌, ರಾಜೀವ್‌ ಗೌಡ, ಭೂಪೇಂದ್ರ ಸಿಂಗ್  ಹೂಡಾ, ರಮೇಶ್‌ ಜೈರಾಮ್‌, ಸಲ್ಮಾನ್‌ ಖುರ್ಷಿದ್‌, ಬಿಂದು ಕೃಷ್ಣನ್‌, ಸೆಲ್ಜಾ ಕುಮಾರಿ, ರಘುವೀರ್‌ ಮೀನಾ, ಬಾಲಚಂದ್ರ ಮುಂಗೇಕರ್‌, ಮೀನಾಕ್ಷಿ ನಟರಾಜನ್‌, ರಂಜಿನಿ ಪಾಟೀಲ್‌, ಸಚಿನ್‌ ರಾವ್‌, ತಮ್ರದ್ವಾಜ್‌ ಸಾಹು, ಮುಕುಲ್‌ ಸಂಗ್ರಾಮ್‌, ಶಶಿತರೂರ್‌, ಮತ್ತು ಲಲಿತೇಶ್‌ ತ್ರಿಪಾರ್ಟಿ ಇದ್ದಾರೆ.
ಪ್ರಚಾರ ಸಮಿತಿಯಲ್ಲಿ ರಮ್ಯಾ!
ಪ್ರಚಾರ ಸಮಿತಿಯಲ್ಲಿ ಚರಣ್‌ ದಾಸ್‌ ಭಕ್ತ, ಪ್ರವೀಣ್‌ ಚಕ್ರವರ್ತಿ, ಮಿಲಿಂದ್‌ ಡೇರಾ, ಕೇತ್ಕರ್‌ ಕುಮಾರ್‌, ಪವನ್‌ ಖೇರಾ, ವಿ.ಡಿ.ಸತೀಸನ್‌, ಆನಂದ್‌ ಶರ್ಮಾ, ಜೈವೀರ್‌, ರಾಜೀವ್‌ ಶುಕ್ಲಾ, ದಿವ್ಯ ಸ್ಪಂದನಾ, ಮನೀಶ್‌ ತಿವಾರಿ, ಪ್ರಮೋದ್‌ ತಿವಾರಿ ಮತ್ತು ರಣ್‌ ದೀಪ್‌ ಸುರ್ಜೆವಾಲಾ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com