ದೆಹಲಿಯ ರಾಮ್ ಲೀಲಾ ಮೈದಾನಕ್ಕೆ ಮಾಜಿ ಪ್ರಧಾನಿ ವಾಜಪೇಯಿ ಹೆಸರು?

: ನಗರದ ರಾಮ್ ಲೀಲಾ ಮೈದಾನಕ್ಕೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ಅವರ ಹೆಸರನ್ನಿಡುವಂತೆ ದೆಹಲಿ ಮುನಿಸಿಪಲ್ ./.
ಅಟಲ್ ಬಿಹಾರಿ ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿ
ನವದೆಹಲಿ: ನಗರದ ರಾಮ್ ಲೀಲಾ ಮೈದಾನಕ್ಕೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ಅವರ ಹೆಸರನ್ನಿಡುವಂತೆ ದೆಹಲಿ ಮುನಿಸಿಪಲ್ ಕಾರ್ಪೋರೇಷನ್ ಪ್ರಸ್ತಾವನೆ ಮಾಡಲಾಗಿದೆ.
ದೆಹಲಿಯ ಐತಿಹಾಸಿಕ ರಾಮ್ ಲೀಲಾ ಮೈದಾನದಲ್ಲಿ ಹಲವು ರಾಜಕೀಯ ರ್ಯಾಲಿಗಳು, ಸಭೆ, ಸಮಾರಂಭ, ಹಬ್ಬ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 
ವಾಜಪೇಯಿ ಅವರು ದೇಶಕಂಡ ಅದ್ಭುತ ಆಡಳಿತಗಾರ, ಹೀಗಾಗಿ ಅವರ ಹೆಸರನ್ನು ರಾಮ ಲೀಲಾ ಮೈದಾನಕ್ಕೆ ನಾಮಕರಣ ಮಾಡಬೇಕೆಂದು ಹಲವು ನಾಯಕರು ಒತ್ತಾಯಿಸಿದ್ದಾರೆ.
ಇನ್ನೂ ವಾಜಪೇಯಿ ಅವರ ಗೌರವಾರ್ಥ ಜಾರ್ಖಂಡ್ ಸರ್ಕಾರ ಕೂಡ ಹಲವು ಸ್ಥಳಗಳಿಗೆ ವಾಜಪೇಯಿ ಅವರ ಹೆಸರನ್ನಿಡಲು ನಿರ್ಧರಿಸಿದೆ.
ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು, ಅಟಲ್ ಬಿಹಾರಿ ವಾಜಪೇಯಿ ಸಾಹಿಬ್ ಗಂಝ್ ಹಾರ್ಬರ್ ಎಂದು ನಾಮ ಕರಣ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com