ವಾಯುವ್ಯ ಇರಾನ್ ನಲ್ಲಿ ಪ್ರಬಲ ಭೂಕಂಪ: ಇಬ್ಬರ ಬಲಿ, 241 ಮಂದಿಗೆ ಗಾಯ

ಇರಾನ್ ನಲ್ಲಿ ಭಾನುವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.9ರಷ್ಟು ತೀವ್ರತೆ ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಟೆಹ್ರಾನ್: ಇರಾನ್ ನಲ್ಲಿ ಭಾನುವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.9ರಷ್ಟು ತೀವ್ರತೆ ದಾಖಲಾಗಿದೆ.
ವಾಯುವ್ಯ ಇರಾನ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಇಬ್ಬರು ಬಲಿಯಾಗಿದ್ದು 240ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇರಾಕ್ ಮತ್ತು ಇರಾನ್ ಗಡಿಭಾಗದಲ್ಲಿರುವ ಕೆರ್ಮನ್ಶಾ ಪ್ರಾಂತ್ಯದ ಜವನ್ರುದ್ ನಗರದಲ್ಲಿ ಭೂಮಿ ಕಂಪಿಸಿರುವುದಾಗಿ ಯುಎಸ್ ಭೂಗರ್ಭಶಾಸ್ತ್ರ ಇಲಾಖೆ ತಿಳಿಸಿದೆ. 
ಈ ಪ್ರದೇಶದ ಸಮೀಪವೇ ಕಳೆದ ವರ್ಷ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಇನ್ನು ಇಂದಿನ ಘಟನೆಯಲ್ಲಿ ಓರ್ವ ಗರ್ಭಿಣಿ ಮಹಿಳೆ ಹಾಗೂ 70ರ ಹರೆಯದ ವೃದ್ಧರೊಬ್ಬರು ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 5.9 ತೀವ್ರತೆಯ ಭೂಕಂಪದ ನಂತರ 21 ಪಾಶ್ಚಾತ್‌ ಕಂಪನಗಳು ಸಂಭವಿಸಿದ್ದವು ಎಂದು ವರದಿ ತಿಳಿಸಿದೆ. 
ಪೀಡಿತ ಪ್ರದೇಶಗಳಲ್ಲಿ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅವುಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು. ಆದರೆ ಆಹಾರ ಮತ್ತು ಟೆಂಟ್ ಗಳನ್ನು ವಿತರಿಸುವ ಅಗತ್ಯ ಈವರೆಗೆ ಕಂಡುಬಂದಿಲ್ಲ ಎಂದು ಸ್ಥಳೀಯ ಆಡಳಿತ ಸ್ಪಷ್ಟಪಡಿಸಿರುವುದಾಗಿ ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com