ಸುಪ್ರೀಂ ಕೋರ್ಟ್ ನಲ್ಲಿ ಬದಲಾವಣೆಯ ಗಾಳಿ, ಸಿಜೆಐ ಆಗಿ ಜಸ್ಟಿಸ್ ರಂಜನ್ ಗಗೋಯ್ ಆಯ್ಕೆ ಸಾಧ್ಯತೆ

ಈ ಹಿಂದೆ ಸಿಜೆಐ ವಿರುದ್ಧ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ವಿಚಾರ ಇನ್ನೂ ಹಸಿರಾಗಿರುವಾಗಲೇ ನೂತನ ಸಿಜೆಐ ಆಯ್ಕೆ ಕಸರತ್ತು ರಂಗೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಈ ಹಿಂದೆ ಸಿಜೆಐ ವಿರುದ್ಧ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ವಿಚಾರ ಇನ್ನೂ ಹಸಿರಾಗಿರುವಾಗಲೇ ನೂತನ ಸಿಜೆಐ ಆಯ್ಕೆ ಕಸರತ್ತು ರಂಗೇರಿದೆ.
ಇದೇ ಅಕ್ಟೋಬರ್ 2ರಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನಿವೃತ್ತಿಯಾಗಲಿದ್ದು, ಅವರ ಬಳಿಕ ಆ ಸ್ಥಾನಕ್ಕೆ ಜಸ್ಟಿಸ್ ರಂಜನ್ ಗಗೋಯ್ ನೇಮಕವಾಗುವ ಸಾಧ್ಯತೆ ಗಳಿವೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಖಾಸಗಿ ಆಂಗ್ಲ ಪತ್ರಿಕೆಯೊಂದು ವರದಿ ಪ್ರಕಟಿಸಿದ್ದು, ಕಾನೂನು ಸಚಿವಾಲಯ ತಮ್ಮ ಉತ್ತರಾಧಿಕಾರಿ ಅಥವಾ ಮುಂದಿನ ಸಿಜೆಐ ಸ್ಥಾನಕ್ಕೆ ವ್ಯಕ್ತಿಯ ಹೆಸರು ಶಿಫಾರಸ್ಸು ಮಾಡುವಂತೆ ಕೋರಿದೆ ಎನ್ನಲಾಗಿದೆ. 
ಈ ಬಗ್ಗೆ ದೀಪಕ್ ಮಿಶ್ರಾ ಅವರು ಸೆಪ್ಟೆಂಬರ್ 2ರಂದು ಕಾನೂನು ಸಚಿವಾಲಯಕ್ಕೆ ಪತ್ರ ಬರೆದು ತಮ್ಮ ಶಿಫಾರಸ್ಸು ರವಾನೆ ಮಾಡಲಿದ್ದಾರೆ. 
ಪ್ರಸ್ತುತ ದೀಪಕ್ ಮಿಶ್ರಾ ಅವರ ಬಳಿಕ ಸೇವಾ ಹಿರಿತನದ ಆಧಾರದ ಮೇಲೆ ನಾಲ್ಕು ಮಂದಿ ನ್ಯಾಯಮೂರ್ತಿಗಳು ರೇಸ್ ನಲ್ಲಿದ್ದು, ಈ ಪೈಕಿ ಜಸ್ಟಿಸ್ ರಂಜನ್ ಗಗೋಯ್ ಅಗ್ರ ಪೈಪೋಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸೇವಾ ಹಿರಿತನದ ಆಧಾರದ ಮೇಲೆ ನೀಡುವುದಾದರೇ ಮುಂದಿನ ಸಿಜೆಐ ಆಗಿ ಜಸ್ಟಿಸ್ ರಂಜನ್ ಗಗೋಯ್ ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com