ಹಿಮಾಚಲ ಪ್ರದೇಶ: ಬೆಟ್ಟ ಕುಸಿತ, ಒಬ್ಬ ವ್ಯಕ್ತಿ, 116 ಜಾನುವಾರುಗಳು ಸಾವು

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ನಿರ್ಮಂದ್ ಗ್ರಾಮದಲ್ಲಿ ಬೆಟ್ಟದ ಒಂದು ಭಾಗ ಕುಸಿತದಿಂದ ಬಂಡೆಗಳ ಅಡಿಯಲ್ಲಿ ಸಿಕ್ಕಿಬಿದ್ದು ಒಬ್ಬ ಮನುಷ್ಯ ಮತ್ತು 116 ಜಾನುವಾರಗಳು ಮೃತಪಟ್ಟಿವೆ.
ಬೆಟ್ಟ ಕುಸಿತವಾಗಿರುವ ಪ್ರದೇಶ
ಬೆಟ್ಟ ಕುಸಿತವಾಗಿರುವ ಪ್ರದೇಶ

ಕುಲ್ಲು : ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ನಿರ್ಮಂದ್ ಗ್ರಾಮದಲ್ಲಿ ಬೆಟ್ಟದ ಒಂದು ಭಾಗ ಕುಸಿತದಿಂದ ಬಂಡೆಗಳ ಅಡಿಯಲ್ಲಿ ಸಿಕ್ಕಿಬಿದ್ದು  ಒಬ್ಬ ಮನುಷ್ಯ ಮತ್ತು 116 ಜಾನುವಾರಗಳು ಮೃತಪಟ್ಟಿವೆ.

ಪಂಚಾಯತ್ ಮುಖ್ಯಸ್ಥ ರಾಕೇಶ್ ಠಾಕೂರ್ ಘಟನೆ ಕುರಿತು ಖಚಿತಪಡಿಸಿದ್ದು,  ಬೆಟ್ಟ ಕುಸಿತದಿಂದ  ಒಬ್ಬ ವ್ಯಕ್ತಿ ಹಾಗೂ ಜಾನುವಾರುಗಳನ್ನು ಮೃತಪಟ್ಟಿರುವುದನ್ನು ಪತ್ತೆ ಹಚ್ಚಿದ್ದೇವೆ. ಆದರೆ. ಬಂಡೆಗಳ ಅಡಿಯಲ್ಲಿ ಸಿಲುಕಿರುವ ಪ್ರಾಣಿಗಳನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿರುವ  ಕಂದಾಯ ಇಲಾಖೆ  ಸಿಬ್ಬಂದಿ ಹಾಗೂ ಪೊಲೀಸರು
ಪರಿಶೀಲನೆ ಪರಾಮರ್ಶೆ ನಡೆಸುತ್ತಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com