ಮನೋಹರ್ ಪರಿಕ್ಕರ್
ದೇಶ
ಚಿಕಿತ್ಸೆಗಾಗಿ ಮತ್ತೆ ಅಮೆರಿಕಾಗೆ ತೆರಳಲಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್
ಅನಾರೋಗ್ಯದಿಂದ ಸದ್ಯ ಮುಂಬಯಿ ಆಸ್ಪತ್ರೆಗೆ ದಾಖಲಾಗಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಲಿದ್ದಾರೆ ಎಂದು ...
ಪಣಜಿ: ಅನಾರೋಗ್ಯದಿಂದ ಸದ್ಯ ಮುಂಬಯಿ ಆಸ್ಪತ್ರೆಗೆ ದಾಖಲಾಗಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
62 ವರ್ಷದ ಮನೋಹರ್ ಪರಿಕ್ಕರ್. ಕಳೆದ ಬಾರಿ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿ ಜೂನ್ ನಲ್ಲಿ ವಾಪಾಸಾಗಿದ್ದರು. ಈ ತಿಂಗಳ ಆರಂಭದಲ್ಲಿ ಮತ್ತೆ ಚೆಕಪ್ ಗಾಗಿ ಅಮೆರಿಕಾಗೆ ತೆರಳಬೇಕಿತ್ತು, ಹೀಗಾಗಿ ಮುಂಬಯಿಯ ಲೀಲಾವತಿ ಆಸ್ಪತ್ರೆಗೆ ಆಗಸ್ಟ್ 23 ರಂದು ದಾಖಲಾಗಿದ್ದರು, ಇಂದು ಗೋವಾ ಗೆ ಮರಳು ಪರಿಕ್ಕರ್ ಇಂದು ರಾತ್ರಿಯೆ ಅಮೆರಿಕಾಗೆ ತೆರಳಲಿದ್ದಾರೆ.
ಮುಂಬಯಿಯಿಂದ ಅಮೆರಿಕಾಗೆ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ