ಸರ್ಕಾರಕ್ಕೆ ಭಿನ್ನರೇ ಟಾರ್ಗೆಟ್ :ರಾಜಕೀಯ ಕುತಂತ್ರದಿಂದ ಬಂಧನ- ಗೌತಮ್ ನವಲಖಾ

ಸರ್ಕಾರದ ಕುತಂತ್ರದಿಂದ ತಮ್ಮನ್ನು ಬಂಧಿಸಲಾಗಿದೆ ಎಂದು ನಾಗರಿಕ ಹಕ್ಕುಗಳ ಹೋರಾಟಗಾರ ಗೌತಮ್ ನವಲಖಾ ಆರೋಪಿಸಿದ್ದಾರೆ.
ಗೌತಮ್ ನವಲಖಾ
ಗೌತಮ್ ನವಲಖಾ
Updated on

ನವದೆಹಲಿ: ಸರ್ಕಾರದ ಕುತಂತ್ರದಿಂದ ತಮ್ಮನ್ನು ಬಂಧಿಸಲಾಗಿದೆ ಎಂದು  ನಾಗರಿಕ ಹಕ್ಕುಗಳ ಹೋರಾಟಗಾರ ಗೌತಮ್ ನವಲಖಾ ಆರೋಪಿಸಿದ್ದಾರೆ.

ಸರ್ಕಾರದ ಹಗರಣ ಹಾಗೂ ಕಾಶ್ಮೀರದಿಂದ ಕೇರಳದವರೆಗಿನ ವಿಫಲತೆಯ ಗಮನವನ್ನು  ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ಭೀಮಾ ಕೋರೆಗಾಂವ್  ಹಿಂಸಾಚಾರದ ದುಷ್ಕರ್ಮಿಗಳನ್ನು  ಹಿಡಿಯದೆ ರಾಜಕೀಯ ಕುತಂತ್ರದಿಂದ ತಮ್ಮನ್ನು ಬಂಧಿಸಲಾಗಿದೆ ಎಂದು ನವಲಖಾ  ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜಕೀಯವಾಗಿ ಹೋರಾಟ ನಡೆಸಿದ್ದರೆ ಈ ಅವಕಾಶವನ್ನು ಸ್ವಾಗತಿಸುತ್ತೇನೆ. ರಾಜಕೀಯ ನಾಯಕರ ಅಣತಿಯಂತೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ.  ಬಂಧಿಸಿರುವ ಪೊಲೀಸರು ತಮ್ಮ ಮೇಲಿನ  ಒಂದು ಆರೋಪವನ್ನು ಸಾಕ್ಷ್ಯ ಕರಿಸಲಿ ಎಂದು ಅವರು ಹೇಳಿದ್ದಾರೆ.

ಪ್ರಜಾಸತಾತ್ಮಕ ಹಕ್ಕುಗಳ ರಕ್ಷಣೆಗಾಗಿ 40 ವರ್ಷಗಳಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇನೆ. ಸಂಘಟನೆ ವಿಷಯದಲ್ಲಿ ಹಲವು ವಿಚಾರಣೆ ಎದುರಿಸಿದ್ದೇನೆ. ರಾಜಕೀಯ ಕುತಂತ್ರದಿಂದಾಗಿ ತಾವೂ ಬಂಧಿಸಲ್ಪಟ್ಟಿರುವುದಾಗಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com