ಭಾರತದಲ್ಲಿ ಶೀಘ್ರವೇ ನಕ್ಸಲ್ ವಾದ ಅಂತ್ಯ: ರಾಮ್ ಮಾಧವ್

ನಕ್ಸಲರನ್ನು ಬೆಂಬಲಿಸುತ್ತಿದ್ದ ಪ್ರಗತಿಪರ ಚಿಂತಕರು, ಹೋರಾಟಗಾರು ಇದೀಗ ಜೈಲುಗೆ ಹೋಗಲು ಹೆದರುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ
ರಾಮ್ ಮಾಧವ್
ರಾಮ್ ಮಾಧವ್
ಹೈದರಾಬಾದ್: ನಕ್ಸಲರನ್ನು ಬೆಂಬಲಿಸುತ್ತಿದ್ದ ಪ್ರಗತಿಪರ ಚಿಂತಕರು, ಹೋರಾಟಗಾರು ಇದೀಗ ಜೈಲುಗೆ ಹೋಗಲು ಹೆದರುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ. "ಭಾರತದಲ್ಲಿ ಶೀಘ್ರವೇ ನಕ್ಸಲ್ ವಾದವು  ಕೊನೆಗೊಳ್ಳಲಿದೆ" ಎಂದು ಅವರು ಹೇಳಿದರು.
"ಕೆಲವಷ್ಟು ಪ್ರಗತಿಪರರು ಇದೀಗ ಜೈಲಿಗೆ ತೆರಳಲು ಹೆದರುತ್ತಿದ್ದಾರೆ.ಹಾಗಾಗಿ ಅವರು ಗೃಹಬಂಧನಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ನಕ್ಸಲ್ ವಾದ ಅಂತ್ಯ ಕಾಣಲಿದೆ.ಈಗ ಪೊಲೀಸರು ಮತ್ತು ಸರ್ಕಾರದ ಪ್ರಯತ್ನಗಳಿಂದ ನಕ್ಸಲ್ ಪೀಡಿತ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಇಳಿಮುಖವಾಗಿದೆ. ಆದರೆ ಕೆಲವು ಪ್ರಗತಿಪರರು ನಗರದಲ್ಲಿ ವಾಸವಿದ್ದು ತಾವು ನಕ್ಸಲರನ್ನು ಬೆಂಬಲಿಸುತ್ತಿದ್ದಾರೆ.ಇದು ಕೊನೆಗಾಣಬೇಕು" ರಾಮ್ ಮಾಧವ್ ನುಡಿದರು.
ಮೂಲತಃ ನಕ್ಸಲರು ನಮ್ಮ ಶತ್ರುಗಳು. ಆದರೆ ಅವರನ್ನು ಬೆಂಬಲಿಸುವವರಲ್ಲಿ ಕೆಲವರು ಪ್ರಾದ್ಯಾಪಕರು, ಮಾನವ ಹಕ್ಕು ಹೋರಾಟಗಾರರು ಇದ್ದಾರೆ ಎಂದು ಅವರು ವಿವರಿಸಿದರು.
ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ಬಧಿತರಾಗಿರುವ ಐವರು ಹೋರಾಟಗಾರರಾದ  ವರವರ ರಾವ್, ಅರುಣ್ ಫೆರೀರಾ,  ವರ್ನಾನ್ ಗೋನ್ಸಾಲ್ವೆಸ್, ಸುಧಾ ಭಾರದ್ವಜ್ ಮತ್ತು  ಗೌತಮ್ ನವಲಾಖ ಅವರನ್ನು ಸೆಪ್ಟೆಂಬರ್ 5 ರವರೆಗೆ ಗೃಹಬಂಧನದಲ್ಲಿ ಇರಿಸಿಕೊಳ್ಳಲು ಸುಪ್ರೀಂ ಕೋರ್ಟ್ ಪುಣೆ ಪೋಲೀಸರಿಗೆ ನಿರ್ದೇಶನ ನೀಡಿದ ಬೆನ್ನಲ್ಲಿ ರಾಮ್ ಮಾಧವ್ ಈ ಹೇಳಿಕೆ ನಿಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com