ತೆಲಂಗಾಣ: ನೆಚ್ಚಿನ ನಾಯಕರ ಗೆಲುವಿಗಾಗಿ ನಾಲಿಗೆ ಸೀಳಿ, ದೇವಸ್ಥಾನದ ಹುಂಡಿಗೆ ಹಾಕಿದ ಅಭಿಮಾನಿ!

ಆಂಧ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ಮಹೇಶ್ ಎಂಬಾತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ತುಂಡರಿಸಿದ ನಾಲಿಗೆಯನ್ನು ಹೈದ್ರಾಬಾದಿನ ಶ್ರೀನಗರ ಕಾಲೋನಿಯಲ್ಲಿರುವ ದೇವಾಲಯದ ಹುಂಡಿಯಲ್ಲಿ ಹಾಕಿದ್ದಾನೆ.
ನಾಲಿಗೆ ಸೀಳಿಕೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ
ನಾಲಿಗೆ ಸೀಳಿಕೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ

ಹೈದ್ರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣಾ ಕಣ ಚಿತ್ರ, ವಿಚಿತ್ರ ಸಂಗತಿಗಳಿಂದ  ಗಮನ ಸೆಳೆಯುತ್ತಿದೆ. ಚುನಾವಣೆಯಲ್ಲಿ ತಮ್ಮ ನಾಯಕರು ಗೆಲಲ್ಲಿ ಎಂದು ಜನರು  ಹೋಮ, ಯಜ್ಞ ಮತ್ತಿತರ ಪೂಜೆ ಮಾಡುತ್ತಿದ್ದರೆ, ಕೆಲವರು  ದೇವಾಲಯಗಳಿಗೆ ಲಕ್ಷ ಗಟ್ಟಲೇ ಹಣದ ಆಮಿಷವೊಡ್ಡುತ್ತಿದ್ದಾರೆ. ಮತ್ತೆ ಕೆಲವರು ಮೂಢನಂಬಿಕೆಗಳಿಗೆ ಜೋತು ಬಿದಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ಮಹೇಶ್ ಎಂಬಾತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ತುಂಡರಿಸಿದ ನಾಲಿಗೆಯನ್ನು ಹೈದ್ರಾಬಾದಿನ ಶ್ರೀನಗರ ಕಾಲೋನಿಯಲ್ಲಿರುವ ದೇವಾಲಯದ ಹುಂಡಿಯಲ್ಲಿ ಹಾಕಿದ್ದಾನೆ.

ಈ ಸಂದರ್ಭದಲ್ಲಿ ಆತ ಪತ್ರವೊಂದನ್ನು ಬರೆದಿಟ್ಟಿದ್ದು,  ತೆಲಂಗಾಣ ಹಾಗೂ ಆಂಧ್ರಪ್ರದೇಶ ಎರಡು ರಾಜ್ಯಗಳಲ್ಲಿಯೂ ಪ್ರಾಮಾಣಿಕರಾಗಿರುವ  ರಾಜಕಾರಣಿಗಳು ಮುಖ್ಯಮಂತ್ರಿಗಳಾಗಬೇಕು ಎಂದು ಆತ ಬರೆದಿಟ್ಟಿರುವುದಾಗಿ ಬಂಜಾರ ಹಿಲ್ಸ್  ಇನ್ಸ್ ಪೆಕ್ಟರ್ ಗೋವಿಂದ ರೆಡ್ಡಿ ಹೇಳಿದ್ದಾರೆ.

ಶ್ರೀನಗರ ಕಾಲೋನಿಯ ವೆಂಕಟೇಶ್ವರ ದೇವಾಲಯದಲ್ಲಿ ಈ ಘಟನೆ ನಡೆದಿದೆ. ನಂತರ ಮಹೇಶ್ ಓಸ್ಮಾನಿಯಾ ಆಸ್ಪತ್ರೆಗೆ ದೌಡಾಯಿಸಿದ್ದು, ಚಿಕಿತ್ಸೆ ಪಡೆದಿದ್ದಾನೆ. ಆತನ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

2009ರ ಚುನಾವಣೆ ಸಂದರ್ಭದಲ್ಲೂ ನಾಗೇಶ್ ಇದೇ ರೀತಿ ಮಾಡಿದ್ದ ಎನ್ನಲಾಗಿದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ. ಎಸ್ . ರಾಜಶೇಖರ ರೆಡ್ಡಿ ಅವರ ನಿಷ್ಠಾವಂತ ಅಭಿಮಾನಿಯಾಗಿದ್ದು,  ಅವರ ಗೆಲುವಿಗಾಗಿ ತುಂಡಿಸಿದ ನಾಲಿಗೆಯನ್ನು ತ್ಯಾಗ ಮಾಡಿರುವುದಾಗಿ ಹೇಳಿಕೆ ನೀಡಿದ್ದ. 2004ರ ಚುನಾವಣೆ ಸಂದರ್ಭದಲ್ಲೂ ಆತ ಇದೇ ರೀತಿಯಲ್ಲಿ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

ತೆಲಂಗಾಣದಲ್ಲಿ ನಾಳೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com