ನೋಟು ನಿಷೇಧ ಬೆಂಬಲಿಸಿದ್ದ ಕೃಷ್ಣಮೂರ್ತಿ ಸುಬ್ರಮಣಿಯನ್ ಮುಖ್ಯ ಆರ್ಥಿಕ ಸಲಹೆಗಾರ

ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ನೋಟು ನಿಷೇಧ ನೀತಿಯನ್ನು ಬೆಂಬಲಿಸಿದ್ದ ಇಂಡಿಯನ್ ಸ್ಕೂರ್ ಆಫ್ ಬ್ಯುಸಿನೆಸ್ ಹೈದರಾಬಾದ್'ನ ಪ್ರಾಧ್ಯಾಪಕ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ಮುಖ್ಯ ಆರ್ಥಿಕ...
ಕೃಷ್ಣಮೂರ್ತಿ ಸುಬ್ರಮಣಿಯನ್
ಕೃಷ್ಣಮೂರ್ತಿ ಸುಬ್ರಮಣಿಯನ್
ನವದೆಹಲಿ: ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ನೋಟು ನಿಷೇಧ ನೀತಿಯನ್ನು ಬೆಂಬಲಿಸಿದ್ದ ಇಂಡಿಯನ್ ಸ್ಕೂರ್ ಆಫ್ ಬ್ಯುಸಿನೆಸ್ ಹೈದರಾಬಾದ್'ನ ಪ್ರಾಧ್ಯಾಪಕ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ಕೇಂದ್ರ ಸರ್ಕಾರ ಶುಕ್ರವಾರ ನೇಮಕ ಮಾಡಿದೆ. 
ಅರವಿಂದ ಸುಬ್ರಮಣಿಯನ್ ಅವರ ರಾಜೀನಾಮೆಯಿಂದ ಈ ಹುದ್ದೆ ತೆರವಾಗಿತ್ತು. ಸಂಪುಟದ ನೇಮಕಾತಿ ಸಮಿತಿ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಗೆ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ನೇಮಿಸಿದ್ದು, 3 ವರ್ಷಗಳ ಕಾಲ ಕೃಷ್ಣಮೂರ್ತಿಯವರು ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. 
ಮೂಲತಃ ತಮಿಳುನಾಡಿನ ಸುಬ್ರಮಣಿಯನ್ ಪ್ರಸ್ತುತ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ನಲ್ಲಿ ಹಣಕಾಸು ವಿಷಯದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ. ಶಿಕಾಗೋ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್'ನಲ್ಲಿ ಸುಬ್ರಮಣಿಯನ್ ಅವರು ಪಿಹೆಚ್'ಡಿ ಪೂರೈಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com