ಚುನಾವಣೋತ್ತರ ಸಮೀಕ್ಷೆಗೆ ಬೆದರಿದ ಮೋದಿ ಸರ್ಕಾರದಿಂದ ವಾದ್ರಾ ವಿರುದ್ಧ ಇಡಿ ಪ್ರಯೋಗ: ಕಾಂಗ್ರೆಸ್

ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಬೆದರಿದ್ದು, ಹೀಗಾಗಿಯೇ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯದಿಂದ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ...
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ
ನವದೆಹಲಿ: ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಬೆದರಿದ್ದು, ಹೀಗಾಗಿಯೇ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯದಿಂದ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ. 
ನಿನ್ನೆಯಷ್ಟೇ ಅಹ್ಮದ್ ಪಟೇಲ್, ರಂದೀಪ್ ಸುರ್ಜೇವಾಲಾ ಹಾಗೂ ಕಪಿಲ್ ಸಿಬಲ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು, ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಫಲಿತಾಂಶ ನೀರಸವಾಗಿ ಕಂಡುಬಂದಿದ್ದು, ಇದಕ್ಕೆ ಬೆದರಿರುವ ಮೋದಿ ಸರ್ಕಾರ ವಿರೋಧ ಪಕ್ಷಗಳಿಗೆ ಕಿರುಕುಳ ನೀಡುವಂತೆ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಸೂಚಿಸಿದೆ ಎಂದು ಆರೋಪಿಸಿದ್ದಾರೆ. 
ವಾದ್ರಾ ಅವರ ಇಬ್ಬರು ಸಹಚರರ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಯಾವುದೇ ರೀತಿಯ ಎಫ್ಐಆರ್ ದಾಖಲಾಗದಿದ್ದರೂ ವಾದ್ರಾ ಆಪ್ತರಾದ ಮನೋಜ್ ಅರೋರ ಅವರ ಕಚೇರಿ ಮೇಲೆ ಅಕ್ರಮವಾಗಿ ಕ್ರಮ ಕೈಗೊಳ್ಳಲಾಗಿದೆ. ಇದೀಗ ಅರೋರ ಅವರ ಕುಟುಂಬ ರಕ್ಷಣೆಗಾಗಿ ಮುಖ್ಯ ನ್ಯಾಯಾಧೀಶರ ಮೊರೆ ಹೋಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com