ಜಮ್ಮು-ಕಾಶ್ಮೀರ: ಕಿಸ್ತ್ ವಾರ್ ನಲ್ಲಿ ಹಿಜ್ಬುಲ್ ಸಂಘಟನೆಯ ಉಗ್ರನ ಸೆರೆ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ತಳ್ಳುತ್ತಿದ್ದ ಹಿಜ್ಬುಲ್ ಮುಜಹಿದ್ದೀನ್ ಸಂಘಟನೆ ಉಗ್ರನೊಬ್ಬನ್ನು ಕಿಸ್ತ್ ವಾರ್ ಜಿಲ್ಲೆಯಲ್ಲಿ ಇಂದು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಜಮ್ಮು :ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರನ್ನು ಉಗ್ರ  ಚಟುವಟಿಕೆಗಳಿಗೆ ತಳ್ಳುತ್ತಿದ್ದ   ಹಿಜ್ಬುಲ್ ಮುಜಹಿದ್ದೀನ್  ಸಂಘಟನೆ ಉಗ್ರನೊಬ್ಬನ್ನು ಕಿಸ್ತ್ ವಾರ್ ಜಿಲ್ಲೆಯಲ್ಲಿ ಇಂದು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಚಿತ ಮಾಹಿತಿ ಆಧಾರದ ಮೇಲೆ  ಉಗ್ರ ಮೊಹಮ್ಮದ್ ಆಮಿನ್ ಅಲಿಯಾಸ್ ಜಂಹಗೀರ್ ಎಂಬವರ ಸಹಚರರಾಗಿದ್ದ  ಸೌಂದರ್ ದಚ್ಚನ್ ಗ್ರಾಮದ ನಿವಾಸಿ ರಿಯಾಜ್ ಅಹ್ಮದ್ ಬಂಧಿಸಲಾಗಿದೆ ಎಂದು ಕಿಸ್ತ್ ವಾರ್  ಹಿರಿಯ ಪೊಲೀಸ್ ಸೂಪರಿಟೆಂಡೆಂಟ್  ರಾಜಿಂದರ್ ಗುಪ್ತಾ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಇತ್ತೀಚಿಗೆ ಈತ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ   ಎಕೆ ಅಸಾಲ್ಟ್ ರೈಪಲ್ ಚಿತ್ರಗಳು ವೈರಲ್ ಆಗಿದ್ದವು. ಜುಲೈ 1 ರಲ್ಲಿ ಬಂಧಿಸಲಾಗಿದ್ದ ಈತನ ಇಬ್ಬರು ಸಹಚರರ ವಿಚಾರಣೆ ವೇಳೆಯಲ್ಲಿ  ಅಹ್ಮದ್ ಹೆಸರನ್ನು ಬಾಯ್ಬಿಟ್ಟಿದ್ದರು. ಆತನ ಇಬ್ಬರು ಸಹಚರರ ಬಂಧನದ ಹಿನ್ನೆಲೆಯಲ್ಲಿ ಕಿಸ್ತ್ ವಾರ್ ನಲ್ಲಿ  ಪ್ರಕರಣ ದಾಖಲಿಸಲಾಗಿತ್ತು.

ಶ್ರೀನಗರದ ಪರಿಮ್ ಪೂರಾದಲ್ಲಿ ಉಗ್ರ ಚಟುವಟಿಕೆ ಸಂಬಂಧಿಸಿದಂತೆ ಅಹ್ಮದ್ ಮೇಲೆ  ಮತ್ತೊಂದು ಪ್ರಕರಣವನ್ನು  ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
  ಜಹಂಗೀರ್  ಹಲವು ದಿನಗಳಿಂದ ಕಿಸ್ತ್ ವಾರ್ ನಲ್ಲಿ ಭಯೋತ್ಪಾದನ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು, ಅಹ್ಮದ್ ಬಂಧನದ ನಂತರ ಮತ್ತಷ್ಟು ಮಂದಿ ಬಂಧಿಸಿ ಶಸಾಸ್ತ್ರ ವಶಪಡಿಸಿಕೊಳ್ಳುವ ಸಾಧ್ಯತೆ ಇರುವುದಾಗಿ  ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com