ನವದೆಹಲಿ: 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಿದ ಅಂಗವಾಗಿ ದೇಶಾದ್ಯಂತ ಇಂದು ವಿಜಯ್ ದಿವಸ್ ಆಚರಿಸಲಾಗುತ್ತಿದ್ದು, ಹುತಾತ್ಮ ಯೋಧರನ್ನು ಸ್ಮರಿಸಲಾಗುತ್ತಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನೆಯ ಉಪ ಮುಖ್ಯಸ್ಥ ಲೆಪ್ಟಿನೆಟ್ ಜನರಲ್ ದೇವರಾಜ್ ಅಂಬು, ನೌಕದಳದ ಮುಖ್ಯಸ್ಥ ಆಡ್ಮೀರಲ್ ಸುನೀಲ್ ಲಾಂಬಾ, ಏರ್ ಚೀಪ್ ಮಾರ್ಷಲ್ ಬಿೇಂದ್ರ ಸಿಂಗ್ ದಾನೊಹಾ ಅಮರ್ ಜ್ಯೋತಿ ಬಳಿ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಆರ್ಪಿಸಿದರು.
ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ಅವರ ಅಪ್ರತಿಮ ಧೈರ್ಯ, ದೇಶ ಭಕ್ತಿ ನಮ್ಮ ದೇಶಕ್ಕೆ ಸುರಕ್ಷತೆ ಒದಗಿಸಿದ್ದು, ಅವರ ಸೇವೆ ಯಾವಾಗಲು ಪ್ರತಿಯೊಬ್ಬ ಭಾರತೀಯರನ್ನು ಸ್ಪೂರ್ತಿ ತುಂಬಲಿದೆ ಎಂದು ಟ್ವೀಟರ್ ಸಂದೇಶ ಮಾಡಿದ್ದಾರೆ.
Today on #VijayDiwas, we remember the indomitable spirit of the brave soldiers who fought in 1971. Their unwavering courage and patriotism ensured our country is safe. Their service will always inspire every Indian.
1971ರಲ್ಲಿ ಸಶಸ್ತ್ರ ಪಡೆಗಳು ದೇಶಕ್ಕಾಗಿ ಹೋರಾಡಿ ವಿಶ್ವದಾದ್ಯಂತ ಮಾನವ ಸ್ವಾತಂತ್ರ್ಯ ತತ್ವಗಳನ್ನು ಹರಡಿದ್ದಾರೆ. ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಯೋದರಿಗೆ ನಾವೆಲ್ಲ ಸಂತಾಪ ಸೂಚಿಸಬೇಕಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸ್ಮರಿಸಿದ್ದಾರೆ