ಬ್ಯಾಂಕ್, ಟೆಲಿಕಾಂ ಸಂಸ್ಥೆಗಳು ಆಧಾರ್ ಕೇಳಿದರೆ 1 ಕೋಟಿ ರೂ ದಂಡ, ಸಿಬ್ಬಂದಿಗಳಿಗೆ ಜೈಲು!

ಇನ್ನು ಮುಂದಿನ ದಿನಗಳಲ್ಲಿ ಬ್ಯಾಂಕ್ ಹಾಗೂ ಟೆಲಿಕಾಂ ಸಂಸ್ಥೆಗಳು ಆಧಾರ್ ಕಾರ್ಡ್ ಕೇಳಿದರೆ 1 ಕೋಟಿ ರೂಪಾಯಿ ದಂಡ ವಿಧಿಸಬಹುದಾಗಿದ್ದು, ಸಿಬ್ಬಂದಿಗಳಿಗೆ ಜೈಲು ಶಿಕ್ಷೆಯೂ ವಿಧಿಸಬಹುದಾಗಿದೆ.
ಬ್ಯಾಂಕ್, ಟೆಲಿಕಾಂ ಸಂಸ್ಥೆಗಳು ಆಧಾರ್ ಕೇಳಿದರೆ 1 ಕೋಟಿ ರೂ ದಂಡ, ಸಿಬ್ಬಂದಿಗಳಿಗೆ ಜೈಲು!
ಬ್ಯಾಂಕ್, ಟೆಲಿಕಾಂ ಸಂಸ್ಥೆಗಳು ಆಧಾರ್ ಕೇಳಿದರೆ 1 ಕೋಟಿ ರೂ ದಂಡ, ಸಿಬ್ಬಂದಿಗಳಿಗೆ ಜೈಲು!
ನವದೆಹಲಿ: ಇನ್ನು ಮುಂದಿನ ದಿನಗಳಲ್ಲಿ ಬ್ಯಾಂಕ್ ಹಾಗೂ ಟೆಲಿಕಾಂ ಸಂಸ್ಥೆಗಳು ಆಧಾರ್ ಕಾರ್ಡ್ ಕೇಳಿದರೆ 1 ಕೋಟಿ ರೂಪಾಯಿ ದಂಡ ವಿಧಿಸಬಹುದಾಗಿದ್ದು, ಸಿಬ್ಬಂದಿಗಳಿಗೆ ಜೈಲು ಶಿಕ್ಷೆಯೂ ವಿಧಿಸಬಹುದಾಗಿದೆ. 
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ, ಆಧಾರ್ ದುರ್ಬಳಕೆ ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಕಾನೂನು ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದ್ದು ಆಧಾರ್ ಕಾರ್ಡ್ ಕೇಳುವ ಬ್ಯಾಂಕ್ ಅಥವಾ ಟೆಲಿಕಾಂ ಸಿಬ್ಬಂದಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ. 
ಖಾಸಗಿ ಸಂಸ್ಥೆಗಳು ಆಧಾರ್ ನ್ನು ಬಳಕೆ ಮಾಡಿಕೊಳ್ಳುವುದನ್ನು ನಿರ್ಬಂಧಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿದ್ದು, ಟೆಲಿಗ್ರಾಫ್ ಕಾಯ್ದೆ, ಪಿಎಂಎಲ್ಎ ಕಾಯ್ದೆಗೆ ತಿದ್ದುಪಡಿ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದೆ. ತಿದ್ದುಪಡಿ ಪ್ರಸಕ್ತ ಅಧಿವೇಶನದಲ್ಲೇ ಮಂಡನೆಯಾಗುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com