ಮೇರಿ ಮೇಡಂ ಮಹಾನ್: ಸುಷ್ಮಾ ಸ್ವರಾಜ್ ಕುರಿತು ಪಾಕ್ ನಿಂದ ಬಂದ ಹಮೀದ್ ಅನ್ಸಾರಿ ತಾಯಿ ಮೆಚ್ಚುಗೆ

ತನ್ನ ಸ್ನೇಹಿತೆಯನ್ನು ಭೇಟಿಯಾಗಲು ತೆರಳಿದ್ದಾಗ ಪಾಕಿಸ್ಥಾನದಲ್ಲಿ 8 ವರ್ಷಗಳಿಂದ ಬಂಧನಕ್ಕೊಳಗಾಗಿದ್ದ ಭಾರತೀಯ ಎಂಜಿನಿಯರ್‌ ಹಮೀದ್‌ ಅನ್ಸಾರಿ ...
ಹಮೀದ್ ಅನ್ಸಾರಿ ಮತ್ತು ಸುಷ್ಮಾ ಸ್ವರಾಜ್
ಹಮೀದ್ ಅನ್ಸಾರಿ ಮತ್ತು ಸುಷ್ಮಾ ಸ್ವರಾಜ್
ನವದೆಹಲಿ: ತನ್ನ ಸ್ನೇಹಿತೆಯನ್ನು ಭೇಟಿಯಾಗಲು ತೆರಳಿದ್ದಾಗ ಪಾಕಿಸ್ಥಾನದಲ್ಲಿ  8 ವರ್ಷಗಳಿಂದ ಬಂಧನಕ್ಕೊಳಗಾಗಿದ್ದ ಭಾರತೀಯ ಎಂಜಿನಿಯರ್‌ ಹಮೀದ್‌ ಅನ್ಸಾರಿ ಬಿಡುಗಡೆಗೊಂಡು ಮಂಗಳವಾರ ಭಾರತಕ್ಕೆ ವಾಪಸಾಗಿದ್ದಾರೆ,
ಭಾರತಕ್ಕೆ ವಾಪಾಸಾದ ನಂತರ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದರು, ಈ ವೇಳೆ ಅನ್ಸಾರಿ ತಾಯಿ ಮೇರಾ ಭಾರತ್ ಮಹಾನ್, ಮೇರಿ ಮೇಡಂ ಮಹಾನ್, ಸಬ್ ಮೇಡಂ ನೇ ಹಿ ಕಿಯಾ ಹಾಯ್ ಎಂದು ಘೋಷಣೆ ಕೂಗಿದರು.
2012ರಲ್ಲಿ ಸ್ನೇಹಿತೆಯನ್ನು ಭೇಟಿಯಾಗಲು ಆಫ್ಘಾನಿಸ್ತಾನ ಮೂಲಕ ಪಾಕಿಸ್ತಾನ ಪ್ರವೇಶಿಸಿದ್ದ ಮುಂಬೈ ನಿವಾಸಿ ಅನ್ಸಾರಿಯನ್ನು ಭಾರತದ ಗುಪ್ತಚರ ಇಲಾಖೆ ಸಿಬ್ಬಂದಿ ಎಂಬ ಗುಮಾನಿ ಮೇಲೆ ಪಾಕ್‌ ಸೆರೆಹಿಡಿದಿತ್ತು. 3 ವರ್ಷಗಳ ಅಧಿಕೃತ ಜೈಲು ಶಿಕ್ಷೆ ಸೇರಿ ಒಟ್ಟು 6 ವರ್ಷಗಳ ಕಾಲ ಅವರನ್ನು ಒತ್ತೆ ಇರಿಸಿಕೊಂಡಿತ್ತು. ಕಳೆದ ಡಿ.15ರಂದು ಬಿಡುಗಡೆ ಮಾಡಿತ್ತು. ಆದರೂ ಅವರ ದಾಖಲೆ ಪತ್ರಗಳು ಸಮರ್ಪಕವಾಗಿರಲಿಲ್ಲ ಎಂದು ಇಸ್ಲಾಮಾಬಾದ್‌ನಲ್ಲಿ ಅವರನ್ನು ಇರಿಸಲಾಗಿತ್ತು. ಕಡೆಗೂ ಮಂಗಳವಾರ ಅವರನ್ನು ಭಾರತಕ್ಕೆ ಕಳಿಸಿಕೊಟ್ಟಿದೆ.
8 ವರ್ಷಗಳ ನಂತರ ಹಮೀದ್ ಅನ್ಸಾರಿ  ತಮ್ಮ ಕುಟುಂಬಸ್ಥರ ಜೊತೆಗೆ ಒಂದಾಗಿದ್ದಾರೆ, ಸತತ ಹಲವು ವರ್ಷಗಳಿಂದ ಹೋರಾಟ ನಡೆಸಿ ಕೊನೆಗೂ ಭಾರತಕ್ಕೆ ಮರಳಿದ್ದಾರೆ. ತಮ್ಮ ಮಗ ಭಾರತಕ್ಕೆ ವಾಪಸಾಗಿರುವುದು  ಮಾನವೀಯತೆಗೆ ಸಿಕ್ಕ ನ್ಯಾಯ ಎಂದು ಅಮೀನ್ ಹನ್ಸಾರಿ ತಾಯಿ ಪೌಝಿಯಾ ನೇಹಾಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com