ವಾಯುಸೇನೆಗೆ ರಫೇಲ್ ಯುದ್ಧ ವಿಮಾನ ತೀರಾ ಅನಿವಾರ್ಯ: ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವಾ

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಿಸಿರುವ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಅವರು, ರಫೇಲ್ ವಿಮಾನ ವಾಯುಸೇನೆಗೆ ತೀರಾ ಅನಿವಾರ್ಯವಾಗಿದೆ...
ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವಾ
ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವಾ
ಜೋದ್ಪುರ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಿಸಿರುವ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಅವರು, ರಫೇಲ್ ವಿಮಾನ ವಾಯುಸೇನೆಗೆ ತೀರಾ ಅನಿವಾರ್ಯವಾಗಿದೆ ಎಂದು ಗುರುವಾರ ಹೇಳಿದ್ದಾರೆ. 
ಜೋದ್ಪುರದಲ್ಲಿ ನಡೆಯುತ್ತಿರುವ ಭಾರತ ಹಾಗೂ ರಷ್ಯಾ ವಾಯುಪಡೆಗಳ ನಡುವಿನ ಜಂಟಿ ಸಮಾರಾಭ್ಯಾಸವನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಫೇಲ್ ವಿಮಾನ ವಾಯುಪಡೆಗೆ ತೀರಾ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಉತ್ತಮ ತೀರ್ಪು ನೀಡಿದ್ದು, ನಾನು ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, ಪ್ರಸ್ತುತ ವಾಯುಪಡೆಗೆ ರಫೇಲ್ ಯುದ್ಧ ವಿಮಾನದ ಅಗತ್ಯ ಹೆಚ್ಚಿದೆ. ರಫೇಲ್ ಯುದ್ಧ ವಿಮಾನ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಪಸ್ವರವಿಲ್ಲ ಎಂದು ತಿಳಿಸಿದ್ದಾರೆ. 
ಯುದ್ಧ ವಿಮಾನ ಖರೀದಿ ಮೌಲ್ಯಗಳ ಬಹಿರಂಗಪಡಿಸಬೇಕೆಂಬ ಆಗ್ರಹಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಅವರು, ವಿಮಾನದ ಮೌಲ್ಯಗಳನ್ನು ಬಹಿರಂಗ ಪಡಿಸಿದ್ದೇ ಆದರೆ, ಶತ್ರುಗಳು ನಮ್ಮ ಬಳಿಯಿರುವ ವಿಮಾನದ ಸಾಮರ್ಥ್ಯವನ್ನು ತಿಳಿಯುವ ಸಾಧ್ಯತೆಗಳಿವೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com