ಮಂಜು ತಂದ ಅವಾಂತರ: ಹರ್ಯಾಣ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ 8 ಬಲಿ!

ಉತ್ತರ ಭಾರತದಲ್ಲಿ ಚಳಿಯ ರೌದ್ರಾವತಾರ ಮುಂದುವರೆದಿದ್ದು, ಗುರುಗಾಂವ್ ನಲ್ಲಿ ತಾಪಮಾನ ಶೂನ್ಯಕ್ಕೆ ಕುಸಿದ ಬೆನ್ನಲ್ಲೇ ಹರ್ಯಾಣದಲ್ಲಿ ಇದೇ ಚಳಿ ಮತ್ತು ರಸ್ತೆ ಮೇಲೆ ತೀವ್ರ ಮಂದು ಕವಿದಿದ್ದರಿಂದ ಸರಣಿ ಅಪಘಾತ ಸಂಭವಿಸಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದಾರೆ.
ಹರ್ಯಾಣ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ
ಹರ್ಯಾಣ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ
Updated on
ಝಜ್ಜರ್: ಉತ್ತರ ಭಾರತದಲ್ಲಿ ಚಳಿಯ ರೌದ್ರಾವತಾರ ಮುಂದುವರೆದಿದ್ದು, ಗುರುಗಾಂವ್ ನಲ್ಲಿ ತಾಪಮಾನ ಶೂನ್ಯಕ್ಕೆ ಕುಸಿದ ಬೆನ್ನಲ್ಲೇ ಹರ್ಯಾಣದಲ್ಲಿ ಇದೇ ಚಳಿ ಮತ್ತು ರಸ್ತೆ ಮೇಲೆ ತೀವ್ರ ಮಂದು ಕವಿದಿದ್ದರಿಂದ ಸರಣಿ ಅಪಘಾತ ಸಂಭವಿಸಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದಾರೆ.
ಹರ್ಯಾಣದ ಝಜ್ಜರ್ ನಲ್ಲಿ ಈ ಸರಣಿ ಅಪಘಾತ ಸಂಭವಿಸಿದ್ದು, ಮಂಜು ಕವಿದಿದ್ದರಿಂದ ರಸ್ತೆ ಮೇಲಿದ್ದ ವಾಹನಗಳು ಕಾಣುತ್ತಿರಲಿಲ್ಲ. ಪರಿಣಾಮ ಬೃಹತ್ ಟ್ರಕ್ ವೊಂದು ತನ್ನ ಮುಂದಿದ್ದ ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸುಮಾರು 10ಕ್ಕೂ ಹೆಚ್ಚು ವಾಹನಗಳು ಈ ಅಪಘಾತದಲ್ಲಿ ಜಖಂಗೊಂಡಿದ್ದು, ದುರ್ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.
ಟ್ರಕ್ ಮುಂದಿದ್ದ ಜೀಪ್ ನಲ್ಲಿ ಸಂಚರಿಸುತ್ತಿದ್ದ ಸುಮಾರು 5ಕ್ಕೂ ಹೆಚ್ಚು ಮಂದಿ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಂತೆಯೇ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಗಾಯಾಳುಗಳನ್ನು ಝಜ್ಜರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com