ಮಾನಿತಿ ಸಂಘಟನೆ ಸದಸ್ಯರ ಬೆನ್ನಲ್ಲೇ ಅಯ್ಯಪ್ಪ ದರ್ಶನಕ್ಕೆ ತೆರಳಿದ್ದ ಇಬ್ಬರು ಮಹಿಳೆಯರೂ ವಾಪಸ್

ಶಬರಿಮಲೆಯಲ್ಲಿ ಭಾನುವಾರ ನಡೆದ ಹೈಡ್ರಾಮಾ ಬಳಿಕ ಅಂತಹುದೇ ಮತ್ತೊಂದು ಘಟನೆ ಸೋಮವಾರ ನಡೆದಿದ್ದು, ಅಯ್ಯಪ್ಪ ದರ್ಶನಕ್ಕೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಚ್ಚಿ: ಶಬರಿಮಲೆಯಲ್ಲಿ ಭಾನುವಾರ ನಡೆದ ಹೈಡ್ರಾಮಾ ಬಳಿಕ ಅಂತಹುದೇ ಮತ್ತೊಂದು ಘಟನೆ ಸೋಮವಾರ ನಡೆದಿದ್ದು, ಅಯ್ಯಪ್ಪ ದರ್ಶನಕ್ಕೆ ತೆರಳಿದ್ದ ಇಬ್ಬರು ಮಹಿಳೆಯರೂ ಕೂಡ ಭಕ್ತರ ಪ್ರತಿಭಟನೆಗೆ ಹೆದರಿ ವಾಪಸ್ ಆಗಿದ್ದಾರೆ.
ದೇಗುಲ ಪ್ರವೇಶ ಮಾಡಲು ಮುಂದಾಗಿದ್ದ ಮಹಿಳೆಯರಿಗೆ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದರು. ಆದರೆ, ಅಪಾರ ಸಂಖ್ಯೆಯಲ್ಲಿರುವ ಅಯ್ಯಪ್ಪನ ಭಕ್ತರ ಪ್ರತಿಭಟನೆ ನಡೆಸಿದ್ದು, ಮಹಿಳೆಯರನ್ನು ನಡಪಂದಲ್ ಬಳಿ ತಡೆದರು. ಸತತ 4 ಗಂಟೆಯಾದರೂ ಪ್ರತಿಭಟನಾಕಾರರ ಆಕ್ರೋಶ ತಣ್ಣಾಗಗದ ಹಿನ್ನಲೆಯಲ್ಲಿ ಮಹಿಳೆಯರು ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ದರ್ಶನಕ್ಕೆ ಮುಂದಾಗಿದ್ದ ಮಹಿಳೆಯರನ್ನು ಕೋಯಿಕೋಡ್‌ನ ದುರ್ಗಾ ಹಾಗೂ ಮಲಪ್ಪುರಂ ಮೂಲದ ಬಿಂದು ಎಂದು ಗುರುತಿಸಲಾಗಿದೆ. ಇಬ್ಬರೂ 45 ವರ್ಷದ ಆಸುಪಾಸಿನವರಾಗಿದ್ದಾರೆ. ನಿನ್ನೆಯಷ್ಟೇ ತಮಿಳುನಾಡಿನ 11 ಮಹಿಳೆಯರು ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ, ಭಕ್ತರ ತೀವ್ರ ಪ್ರತಿಭಟನೆಗೆ ಬೆದರಿ ದೇವರ ದರ್ಶನ ಪಡೆಯದೆ ವಾಪಸ್ಸಾಗಿದ್ದರು. 
ಇದಕ್ಕೂ ಮುನ್ನ, ಅಪ್ಪಾಚಿಮೇಡು ಹಾಗೂ ಮರಕೂಟ್ಟಂ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಭಕ್ತರನ್ನು ಪೊಲೀಸರು ತೆರವುಗೊಳಿಸಿದ್ದರು. ಆದರೆ, ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾವಣೆಗೊಂಡ ಬಳಿಕ ಅವರನ್ನು ನಿಯಂತ್ರಿಸಲು ಪೊಲೀಸರಿಂದಲೂ ಸಾಧ್ಯವಾಗುತ್ತಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com