ಉತ್ತರ ಪ್ರದೇಶ: ತೀವ್ರ ವಿರೋಧದ ನಂತರ ’ಪಾರ್ಕ್ ಗಳಲ್ಲಿ ನಮಾಜ್’ ಆದೇಶದಲ್ಲಿ ಕೆಲವು ಬದಲಾವಣೆ

ಪಾರ್ಕ್ ಗಳು ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಂ ಉದ್ಯೋಗಿಗಳು ಶುಕ್ರವಾರದ ನಮಾಜ್‌ ಮಾಡುವುದನ್ನು ತಡೆಯಬೇಕು
ಉತ್ತರ ಪ್ರದೇಶ: ತೀವ್ರ ವಿರೋಧದ ನಂತರ 'ನಮಾಜ್ ಮಾಡುವಂತಿಲ್ಲ'ಆದೇಶದಲ್ಲಿ ಕೆಲವು ಬದಲಾವಣೆ
ಉತ್ತರ ಪ್ರದೇಶ: ತೀವ್ರ ವಿರೋಧದ ನಂತರ 'ನಮಾಜ್ ಮಾಡುವಂತಿಲ್ಲ'ಆದೇಶದಲ್ಲಿ ಕೆಲವು ಬದಲಾವಣೆ
ಪಾರ್ಕ್ ಗಳು ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಂ ಉದ್ಯೋಗಿಗಳು ಶುಕ್ರವಾರದ ನಮಾಜ್‌ ಮಾಡುವುದನ್ನು ತಡೆಯಬೇಕು ಎಂದು ಉತ್ತರ ಪ್ರದೇಶದ ಸರ್ಕಾರಿ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶದಲ್ಲಿ ಕೆಲವು ಮಾರ್ಪಾಡು ಮಾಡಲಾಗಿದೆ. 
ಈ ಹಿಂದಿನ ಆದೇಶದಲ್ಲಿ ಒಂದು ವೇಳೆ ಕಂಪನಿಗಳ ಉದ್ಯೋಗಿಗಳು ಪಾರ್ಕ್ ಗಳಲ್ಲಿ ನಮಾಜ್ ಮಾಡುವುದು ಕಂಡುಬಂದರೆ ಅದಕ್ಕೆ ಕಂಪನಿಗಳನ್ನೇ ಹೊಣೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಈ ಅಂಶಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದ್ದು, ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಎನ್ ಸಿಂಗ್, ಕಂಪನಿಗಳ ಉದ್ಯೋಗಿಗಳು ಪಾರ್ಕ್ ಗಳಲ್ಲಿ ನಮಾಜ್ ಮಾಡುವುದು ಕಂಡುಬಂದರೆ ಅದಕ್ಕೆ ಕಂಪನಿಗಳನ್ನು ಹೊಣೆ ಮಾಡುವ ನಿರ್ಧಾರವನ್ನು ವಾಪಸ್ ಪಡೆದಿದ್ದಾರೆ.  ಅಷ್ಟೇ ಅಲ್ಲದೇ ಈ ಸಂಬಂಧ ಕಂಪನಿಗಳೊಂದಿಗೆ ಮಾತುಕತೆ ನಡೆಸುವುದಾಗಿಯೂ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com