ಸರ್ಕಾರಿ ಶಾಲೆಗಳ 9, 10 ನೇ ತರಗತಿಯಲ್ಲಿ ಶಾಲೆ ಬಿಡುವವರ ಸಂಖ್ಯೆ ಈ ರಾಜ್ಯಗಳಲ್ಲಿ ಗಣನೀಯ ಹೆಚ್ಚಳ!

ಸರ್ಕಾರಿ ಶಾಲೆಗಳಲ್ಲಿನ 9, 10 ನೇ ತರಗತಿ ವಿದ್ಯಾರ್ಥಿಗಳಲ್ಲಿ ಡ್ರಾಪ್ ಔಟ್ ಗಳ ಸಂಖ್ಯೆ ಹೆಚ್ಚುತ್ತಿದ್ದು, ಹೊಸ ಆತಂಕಕ್ಕೆ ಕಾರಣವಾಗಿದೆ.
ಸರ್ಕಾರಿ ಶಾಲೆಗಳ 9, 10 ನೇ ತರಗತಿ ಡ್ರಾಪ್ ಔಟ್ ಗಳ ಸಂಖ್ಯೆ ಹೆಚ್ಚಳ!
ಸರ್ಕಾರಿ ಶಾಲೆಗಳ 9, 10 ನೇ ತರಗತಿ ಡ್ರಾಪ್ ಔಟ್ ಗಳ ಸಂಖ್ಯೆ ಹೆಚ್ಚಳ!
ನವದೆಹಲಿ: ಸರ್ಕಾರಿ ಶಾಲೆಗಳಲ್ಲಿನ 9, 10 ನೇ ತರಗತಿ ವಿದ್ಯಾರ್ಥಿಗಳಲ್ಲಿ ಡ್ರಾಪ್ ಔಟ್ ಗಳ ಸಂಖ್ಯೆ ಹೆಚ್ಚುತ್ತಿದ್ದು, ಹೊಸ ಆತಂಕಕ್ಕೆ ಕಾರಣವಾಗಿದೆ. 
ಭಾರತದಾದ್ಯಂತ ಇರುವ ಹಲವು ಸರ್ಕಾರಿ ಶಾಲೆಗಳ ಪರಿಸ್ಥಿತಿ ಇದೇ ಆಗಿದೆ ಎಂದು ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫಾರ್ಮೇಷನ್ ಸಿಸ್ಟಮ್ ಫಾರ್ (ಯು-ಡಿಐಎಸ್ಇ) ವರದಿ ಬಹಿರಂಗಪಡಿಸಿದೆ. ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ತಮಿಳುನಾಡು, ಜಮ್ಮು-ಕಾಶ್ಮೀರ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಈಶಾನ್ಯದ ಕೆಲವು ಭಾಗಗಳಲ್ಲಿ 9,10 ನೇ ತರಗತಿ ಡ್ರಾಪ್ ಔಟ್ ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.
2015-16 ನೇ ಸಾಲಿನ ಅಂಕಿ-ಅಂಶಗಳ ಪ್ರಕಾರ ಬಿಹಾರದಲ್ಲಿ ಪ್ರೌಢಶಾಲೆ ಡ್ರಾಪ್ ಔಟ್ ಗಳ ಸಂಖ್ಯೆ ಶೇ.25.90 ರಷ್ಟಿತ್ತು. ಆದರೆ ಇದೇ ರಾಜ್ಯದಲ್ಲಿ 2016-17 ನೇ ಸಾಲಿನಲ್ಲಿ ಡ್ರಾಪ್ ಔಟ್ ಗಳ ಸಂಖ್ಯೆ ಶೇ.39.73 ಕ್ಕೆ ಏರಿಕೆಯಾಗಿದೆ. ಜಾರ್ಖಂಡ್ ನಲ್ಲಿ 2016-17 ನೇ ಸಾಲಿನಲ್ಲಿ 36.64 ರಷ್ಟಿದ್ದು, ಕಳೆದ ವರ್ಷ ಶೇ.12 ರಷ್ಟಿತ್ತು. ಮಾನವ ಸಂಪನ್ಮೂಲ ಇಲಾಖೆ ಶಾಲಾ ಶಿಕ್ಷಣದ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಜಾರಿಗೆ ತರಲು ಯತ್ನಿಸುತ್ತಿದ್ದರೆ ಇತ್ತ ಡ್ರಾಪ್ ಔಟ್ ಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇದೇ ಯು-ಡಿಐಎಸ್ಇ ವರದಿಯ ಪ್ರಕಾರ 2016-17 ನೇ ಸಾಲಿನಲ್ಲಿ ಪ್ರಾಥಮಿಕ ಹಂತದ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಪಡೆಯುವವರ ಸಂಖ್ಯೆ ಶೇ.100 ರಷ್ಟು ಹೆಚ್ಚಿದ್ದು, ಮಾಧ್ಯಮಿಕ ಹಂತದಲ್ಲಿ ಶೇ.80 ರಷ್ಟಿದ್ದು, ಹಿರಿಯ ಮಾಧ್ಯಮಿಕ ಹಂತಕ್ಕೆ 60 ರಷ್ಟುನ್ನು ಇನ್ನೂ ದಾಟಬೇಕಿದೆ ಎಂದು ವರದಿ ಬಹಿರಂಗಪಡಿಸಿದೆ. 
ಗ್ರಾಮೀಣ ಭಾಗದಲ್ಲಿ ಶಾಲೆಗಳಿಗೆ ಪ್ರವೇಶ ಪಡೆಯುವುದಕ್ಕೆ ಆಸಕ್ತಿ ಕಡಿಮೆ ಇರುವುದು ಡ್ರಾಪ್ ಔಟ್ ಗಳ ಸಂಖ್ಯೆ ಹೆಚ್ಚಲು ಇರುವ ಕಾರಣಗಳಲ್ಲಿ ಒಂದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com