ಅಮೆರಿಕ ಪ್ರಜೆ ಹತ್ಯೆ ದುರಂತ ಬಳಿಕ ವಿದೇಶಿ ಪ್ರವಾಸಿಗರು ನೇರವಾಗಿ ಅಂಡಮಾನ್‌ ಪ್ರಯಾಣಕ್ಕೆ ಅವಕಾಶ!

ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣವನ್ನು ವಲಸೆ ಚೆಕ್ ಪೋಸ್ಟ್ ಆಗಿ ಅಧಿಕೃತವಾಗಿ ಸರ್ಕಾರ ಘೋಷಣೆ ಮಾಡಿದ್ದು ಮಾನ್ಯ ಪ್ರಯಾಣ ದಾಖಲೆಗಳೊಂದಿಗೆ ವಿದೇಶಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣವನ್ನು ವಲಸೆ ಚೆಕ್ ಪೋಸ್ಟ್ ಆಗಿ ಅಧಿಕೃತವಾಗಿ ಸರ್ಕಾರ ಘೋಷಣೆ ಮಾಡಿದ್ದು ಮಾನ್ಯ ಪ್ರಯಾಣ ದಾಖಲೆಗಳೊಂದಿಗೆ ವಿದೇಶಿ ಪ್ರವಾಸಿಗರು ನೇರವಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಭಾರತದಿಂದ ನೇರವಾಗಿ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶವಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಸಾಹಸಯಾತ್ರೆ ಕೈಗೊಂಡಿದ್ದ ಅಮೆರಿಕ ಪ್ರಜೆಯೊಬ್ಬ ಅಕ್ರಮವಾಗಿ ಅಂಡಮಾನ್ ದ್ವೀಪದೊಳಗೆ ಪ್ರವೇಶಿಸಿ ಸೆಂಟಿನಲೀಸ್ ಬುಡಕಟ್ಟು ಜನರು ಆತನನ್ನು ಕೊಂದು ಹಾಕಿದ್ದು ಈ ಘಟನೆ ಜಗತ್ತಿನ ಗಮನ ಸೆಳೆದಿತ್ತು. ಈ ಘಟನೆ ಸಂಭವಿಸಿ ಒಂದು ತಿಂಗಳ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಗೃಹ ಸಚಿವಾಲಯ ಎಸ್ಪಿ, ಸಿಐಡಿ, ಅಂಡಮಾನ್ ಮತ್ತು ನಿಕೋಬಾರ್ ಪೊಲೀಸ್ ರನ್ನು ನಾಗರೀಕ ಅಧಿಕಾರಿಯಾಗಿ ನೇಮಕ ಮಾಡಿದೆ. ಇನ್ನು ಪೋರ್ಟ್ ಬ್ಲೈರ್ ವಿಮಾನ ನಿಲ್ದಾಣವನ್ನು ವಲಸೆ ಚೆಕ್ ಪೋಸ್ಟ್ ಎಂದು ಘೋಷಣೆ ಮಾಡಲಾಗಿದ್ದು ಈ ಘೋಷಣೆ ಇಂದಿನಿಂದಲೇ ಜಾರಿಗೆ ಬರಲಿದೆ. 
ಅಂಡಮಾನ್ ಮತ್ತು ನಿಕೋಬಾರ್ ಗೆ ಸರಿಸುಮಾರು 4 ಲಕ್ಷ ಪ್ರವಾಸಿಗರು ಭೇಟಿ ನೀಡಲಿದ್ದು ಅವರ ಪೈಕಿ ವಿದೇಶಿ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಅಂಕಿ ಅಂಶಗಳ ಪ್ರಕಾರ 2015ರಿಂದ ಇಲ್ಲಿಯವರೆಗೂ 16 ಲಕ್ಷ ಜನರು ಇಲ್ಲಿಗೆ ಭೇಟಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com