ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ: ಎನ್‌ಡಿಪಿಪಿ ಜತೆ ಬಿಜೆಪಿ ಮೈತ್ರಿ

ಫೆಬ್ರವರಿ 27ರಂದು ನಡೆಯಲಿರುವ ನಾಗಾಲ್ಯಾಂಡ್‌ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ನೀಫಿಯೋ ರಿಯೋ ನೇತೃತ್ವದ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೊಹಿಮಾ: ಫೆಬ್ರವರಿ 27ರಂದು ನಡೆಯಲಿರುವ ನಾಗಾಲ್ಯಾಂಡ್‌ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ನೀಫಿಯೋ ರಿಯೋ ನೇತೃತ್ವದ ನೂತನ ಪಕ್ಷ ನ್ಯಾಷನಲಿಸ್ಟ್‌ ಡೆಮೊಕ್ರಾಟಿಕ್‌ ಪೀಪಲ್ಸ್‌ ಪಾರ್ಟಿ (ಎನ್‌ಡಿಪಿಪಿ) ಯೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
ನಿನ್ನೆ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ರಿಯೋ ನಡುವೆ ನಡೆದಿದ್ದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಮಾಧ್ಯಮ ವಿಭಾಗದ ಸಂಚಾಲಕ ಕೆ ಜೇಮ್ಸ್‌ ವಿಜೋ ಅಲಕಪ ಇಂದು ತಿಳಿಸಿದ್ದಾರೆ. 
ನಾಗಾಲ್ಯಾಂಡ್ ನ 60 ವಿಧಾನಸಭಾ ಕ್ಷೇತ್ರಗಳ ಪೈಕಿ ಎನ್ ಡಿಪಿಪಿ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಉಳಿದ 20 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚಿಗಷ್ಟೇ ಬಿಜೆಪಿ ಆಡಳಿತರೂಢ ನಾಗಾ ಪೀಪಲ್ಸ್‌ ಫ್ರಂಟ್‌ (ಎನ್‌ಪಿಎಫ್) ಜೊತೆಗಿನ ತನ್ನ ಹದಿನೈದು ವರ್ಷಗಳ ಮೈತ್ರಿ ಕಡಿದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com