
ನವದೆಹಲಿ : ತಮ್ಮಿಷ್ಟ ಬಂದ ಹಾಗೆ ಕಾನೂನು ಜಾರಿಗೊಳಿಸುವ ಮೂಲಕ ಮಾರ್ಯಾದಾ ಹತ್ಯೆಗಳನ್ನು ಪೋಷಿಸುತ್ತಿರುವ ಕಾಪ್ ಪಂಚಾಯಿತಿಗಳಂತಹ ಸಂಸ್ಥೆಗಳಿಂದ ದಂಪತಿಗಳನ್ನು ರಕ್ಷಿಸುವಂತೆ ಕೇಂದ್ರಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಕಾಪ್ ಪಂಚಾಯಿತಿಗಳು ಸ್ವಯಂ ಘೋಷಿತ ನೈತಿಕ ಕಾವಲುಗಾರರಲ್ಲ, ಇಂತಹ ವಿಚಾರಗಳಲ್ಲಿ ಕಾಪ್ ಪಂಚಾಯಿತಿಗಳ ಕಪಿಮುಷ್ಠಿಗೆ ಸಿಲುಕಿಕೊಂಡಿರುವ ದಂಪತಿಗಳನ್ನು ರಕ್ಷಿಸಲು ಕೇಂದ್ರಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಮಾರ್ಯಾದಾ ಹತ್ಯೆಗಳನ್ನು ಹೇಗೆ ತಡೆಗಟ್ಟಬಹುದು ಎಂಬ ಬಗ್ಗೆಗಿನ ಮಾರ್ಗಸೂತ್ರಕ್ಕಾಗಿ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದ್ದು, ಜಾತಿ. ಸಮಾಜ, ಕಾಪ್ ಪಂಚಾಯಿತಿ ಹೊರತಾಗಿ ವಿವಾಹವಾದ ದಂಪತಿಗಳ ಹಕ್ಕುಗಳನ್ನು ರಕ್ಷಿಸಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಕಳೆದ ತಿಂಗಳು ಹೇಳಿತ್ತು,
ವಯಸ್ಕ ಪುರುಷ ಹಾಗೂ ಮಹಿಳೆ ಪರಸ್ಪರ ಒಪ್ಪಿ ವಿವಾಹವಾದನಂತರ ಅವರನ್ನು ಪ್ರಶ್ನಿಸಲು ಯಾರಿಗೂ ಹಕ್ಕಿಲ್ಲ. ಕಾಪ್ ಅಥವಾ ಸಂಬಂಧಿತ ಸಮುದಾಯವೂ ಪ್ರಶ್ನಿಸಬಾರದು,ಅಂತಹ ದಂಪತಿಗಳ ಮೇಲೆ ಏಲ್ಲಿಯಾದರೂ ಸಾಮೂಹಿಕ ದಾಳಿ ನಡೆದ್ದರೆ ಅದು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಹೇಳಿದ್ದಾರೆ.
Advertisement