ಒಡಿಶಾ: ಪ್ರಥ್ವಿ-2 ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಭೂಮಿಯ ಮೇಲ್ಮೈನಿಂದ ಭೂ ಮೇಲ್ಮೈಗೆ ಹಾರಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಥ್ವಿ 2ನ್ನು ಇಂದು ಒಡಿಶಾ ಕರಾವಳಿಯಿಂದ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ.
ಒಡಿಶಾ: ಪ್ರಥ್ವಿ-2 ಪರೀಕ್ಷಾರ್ಥ ಉಡಾವಣೆ ಯಶಸ್ವಿ
ಒಡಿಶಾ: ಪ್ರಥ್ವಿ-2 ಪರೀಕ್ಷಾರ್ಥ ಉಡಾವಣೆ ಯಶಸ್ವಿ
ಬಾಲಸೂರ್ (ಒಡಿಶಾ): ಭೂಮಿಯ ಮೇಲ್ಮೈನಿಂದ ಭೂ ಮೇಲ್ಮೈಗೆ ಹಾರಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಥ್ವಿ 2ನ್ನು ಇಂದು ಒಡಿಶಾ ಕರಾವಳಿಯಿಂದ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. 350 ಕಿ.ಮೀ ದೂರದ ಗುರಿ ತಲುಪಬಲ್ಲ ಸಾಮರ್ಥ್ಯ ಹೊಂದಿರುವ ಸ್ವದೇಶೀ ನಿರ್ಮಿತ ಕ್ಷಿಪಣಿಯನ್ನು ಒಡಿಶಾದ ಬಾಲಸೂರ್ ಜಿಲ್ಲೆಯ ಅಬ್ದುಲ್ ಕಲಾಂ ದ್ವೀಪದಲ್ಲಿ ಪರೀಖ್ಷೆಗೆ ಗುರಿಪಡಿಸಲಾಗಿತ್ತು.
ಭಾರತೀಯ ಸೈನ್ಯದ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್ ಎಫ್ ಸಿ)ಯು ತರಬೇತಿ ಕಾರ್ಯಾಗಾರದ ಭಾಗವಾಗಿ ಈ ಕ್ಷಿಪಣಿ ಪರೀಕ್ಷೆ ನಡೆಸಿತು. ಕ್ಷಿಪಣಿಯು ಆದಾಗಲೇ ಸಶಸ್ತ್ರ ಸೇನಾ ಪಡೆಗೆ ಸೇರ್ಪಡೆಯಾಗಿದೆ.
8.56 ಮೀಟರ್ ಎತ್ತರ, 4,600 ಕಿಲೋಗ್ರಾಂಗಳಷ್ಟು ತೂಗುವ  ಮಧ್ಯಮ ವ್ಯಾಪ್ತಿಯ ಪ್ರಥ್ವಿ ಕ್ಷಿಪಣಿ 500 ರಿಂದ 1000 ಕೆಜಿ ತೂಕದ  ಶಸ್ತ್ರಾಸ್ತ್ರಗಳನ್ನು ಹೊತ್ತೂಯ್ಯುವ ಸಾಮರ್ಥ್ಯವನ್ನೂ  ಹೊಂದಿವೆ.  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಓ) ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ಜಂಟಿಯಾಗಿ ಈ ಕ್ಷಿಪಣಿಯನ್ನು ಅಭಿವೃದ್ದಿಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com