ಕುಂಭ ಮೇಳದೊಳಗೆ ಶೇ.80ರಷ್ಟು ಗಂಗಾ ನದಿ ಸ್ವಚ್ಛ: ನಿತಿನ್ ಗಡ್ಕರಿ

ಮುಂಬರುವ ಕುಂಭಮೇಳ ಕಾರ್ಯಕ್ರಮದೊಳಗೆ ಗಂಗಾನದಿಯನ್ನು ಶೇ.80ರಷ್ಟು ಶುದ್ಧೀಕರಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಮುಂಬರುವ ಕುಂಭಮೇಳ ಕಾರ್ಯಕ್ರಮದೊಳಗೆ ಗಂಗಾನದಿಯನ್ನು ಶೇ.80ರಷ್ಟು ಶುದ್ಧೀಕರಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವ ನಿತಿನ್ ಗಡ್ಕರಿ ಅವರು, ನಮಾಮಿ ಗಂಗೆ ಯೋಜನೆಯಡಿಯಲ್ಲಿ ಜಾರಿ ಮಾಡಲಾಗಿರುವ ವಿವಿಧ ಯೋಜನೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ನದಿ ಶುದ್ಧೀಕರಣಕ್ಕಾಗಿ ಕೇಂದ್ರ ಸರ್ಕಾರ  ಸುಮಾರು 20 ಸಾವಿರ ಕೋಟಿ ರು.ಗಳನ್ನು ವ್ಯಯಿಸಿದೆ. ಪ್ರಮುಖವಾಗಿ ಮುಂಬರುವ ಕುಂಭಮೇಳದ ಒಳಗೆ ಗಂಗಾನದಿಯ ಶೇ.80ರಷ್ಚನ್ನು ಸ್ವಚ್ಛಗೊಳಿಸುವ ವಿಶ್ವಾಸವಿದೆ. ನಮಾಮಿ ಗಂಗೆ ಯೋಜನೆಯಡಿಯಲ್ಲಿ ಒಟ್ಟು 189  ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಪೈಕಿ ಈಗಾಗಲೇ 47 ಯೋಜನೆಗಳು ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳು ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.
ಅಂತೆಯೇ ಕುಂಭಮೇಳದೊ ಹೊತ್ತಿಗೆ ಶೇ.80ರಷ್ಟು ಗಂಗಾ ನದಿಯನ್ನು ಸ್ವಚ್ಛಗೊಳಿಸುವುದಲ್ಲದೇ ಒಳಚರಂಡಿ ನೀರು ನದಿಗೆ ಸೇರುವುದನ್ನು ತಡೆಯುವುದಲ್ಲದೇ ಒಳಚರಂಡಿ ನೀರು ಶುದ್ಧೀಕರಿಸುವ ಯೋಜನೆಯನ್ನೂ  ಕೈಗೆತ್ತಿಕೊಳ್ಳಲಾಗಿದೆ. ಅಂತೆಯೇ ಕುಂಭಮೇಳಕ್ಕಾಗಿ ಐದು ಪ್ರಮುಖ ಪ್ರದೇಶಗಳಲ್ಲಿ ನದಿ ಬಂದರುಗಳನ್ನು ನಿರ್ಮಿಸುವ ಕುರಿತು ಚರ್ಚೆ ನಡೆಸಲಾಗುತ್ತಿದ್ದು, ರಸ್ತೆ ಮತ್ತು ನೀರಿನ ವ್ಯವ್ಯಸ್ಥೆಯಷ್ಟೇ ಅಲ್ಲದೇ ಸಂಪರ್ಕ ವ್ಯವಸ್ಥೆಯನ್ನೂ  ಕಲ್ಪಿಸುವ ಉದ್ದೇಶವಿದೆ ಎಂದು ಗಡ್ಕರಿ ಹೇಳಿದರು.
ಅಲಹಾಬಾದ್ ನ ಸಂಗಮದಲ್ಲಿ ನಡೆಯುವ ಕುಂಭಮೇಳ ಆತೀದೊಡ್ಡ ಧಾರ್ಮಿಕ ಕೈಂಕರ್ಯಗಳಲ್ಲಿ ಒಂದಾಗಿದ್ದು, ಕುಂಭಮೇಳದ ಸಂದರ್ಭದಲ್ಲಿ ಸುಮಾರು 100 ಮಿಲಿಯನ್ ಗೂ ಅಧಿಕ ಜನರು ಪವಿತ್ರ ಗಂಗೆಯಲ್ಲಿ  ಮಿಂದೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com