ಮಾಲ್ಡೀವ್ಸ್ ಬಿಕ್ಕಟ್ಟು: ವಿಶ್ವಸಂಸ್ಥೆ ಮಧ್ಯಪ್ರವೇಶಕ್ಕೂ ಚೀನಾ ವಿರೋಧ!

ಮಾಲ್ಡೀವ್ಸ್ ನಲ್ಲಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಮುಖ್ಯ ನ್ಯಾಯಮೂರ್ತಿ ಹಾಗೂ ಪ್ರಧಾನಿಯನ್ನು ಬಂಧಿಸಿ ತುರ್ತು ಪರಿಸ್ಥಿತಿ ಹೇರಿರುವುದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಮಧ್ಯಪ್ರವೇಶಕ್ಕೂ ಚೀನಾ ವಿರೋಧ
ಚೀನಾ
ಚೀನಾ
ಬೀಜಿಂಗ್: ಮಾಲ್ಡೀವ್ಸ್ ನಲ್ಲಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಮುಖ್ಯ ನ್ಯಾಯಮೂರ್ತಿ ಹಾಗೂ ಪ್ರಧಾನಿಯನ್ನು ಬಂಧಿಸಿ ತುರ್ತು ಪರಿಸ್ಥಿತಿ ಹೇರಿರುವುದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಮಧ್ಯಪ್ರವೇಶಕ್ಕೂ ಚೀನಾ ವಿರೋಧ ವ್ಯಕ್ತಪಡಿಸಿದೆ. 
ಮಾಲ್ಡೀವ್ಸ್ ನಲ್ಲಿ ತಲೆದೋರಿರುವ ಬಿಕ್ಕಟ್ಟು ಅಲ್ಲಿನ ಆಂತರಿಕ ವಿಚಾರವಾಗಿದೆ. ಮಾಲ್ಡೀವ್ಸ್ ನ ಬಿಕ್ಕಟ್ಟನ್ನು ನಾವು ನಿರಂತರವಾಗಿ ಗಮನಿಸಿದ್ದೇವೆ, ಮಾಲ್ಡೀವ್ಸ್ ನಲ್ಲಿ ನಡೆದಿರುವ ಬೆಳವಣಿಗೆ ಅಲ್ಲಿನ ಆಂತರಿಕ ವಿಚಾರವಾಗಿದೆ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಗೆಂಗ್ ಶುಂಗ್ ಹೇಳಿದ್ದಾರೆ. 
ಮಾಲ್ಡೀವ್ಸ್ ವಿಷಯದಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆಗೆ ಚೀನಾ ಬೆಂಬಲ ನೀಡುತ್ತದೆಯೋ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದ ಶುಂಗ್, ಪರಿಸ್ಥಿತಿಗೆ ಸಂಬಂಧಪಟ್ಟವರೊಂದಿಗೆ ನಿಕಟ ಸಂಪರ್ಕ ಹೊಂದುವುದಕ್ಕೆ ಚೀನಾ ಬಯಸುತ್ತಿದ್ದು, ಈ ಮೂಲಕ ಅಲ್ಲಿ ಸಹಜ ಸ್ಥಿತಿಯನ್ನು ಮರಳಿ ಪಡೆಯುವುದರ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಶುಂಗ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com