ಮೇಘಾಲಯ ವಿಧಾನಸಭಾ ಚುನಾವಣೆ : 443 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಮೇಘಾಲಯದ 60 ಸ್ಥಾನಗಳಿಗೆ ಇದೇ ತಿಂಗಳ 27 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಒಟ್ಟು 443 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಎಫ್. ಆರ್.ಖಾರ್ಕೊಂಗಾರ್ ತಿಳಿಸಿದ್ದಾರೆ.
ಚುನಾವಣೆಯ (ಸಾಂದರ್ಭಿಕ ಚಿತ್ರ)
ಚುನಾವಣೆಯ (ಸಾಂದರ್ಭಿಕ ಚಿತ್ರ)
Updated on: 

ಶಿಲ್ಲಾಂಗ್ : ಮೇಘಾಲಯದ 60  ಸ್ಥಾನಗಳಿಗೆ ಇದೇ ತಿಂಗಳ 27 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಒಟ್ಟು 443 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಎಫ್. ಆರ್.ಖಾರ್ಕೊಂಗಾರ್ ತಿಳಿಸಿದ್ದಾರೆ.

ಈ 443 ಅಭ್ಯರ್ಥಿಗಳ ಪೈಕಿ 59 ಕಾಂಗ್ರೆಸ್ , 53 ಎನ್ ಪಿಪಿ ಹಾಗೂ 47 ಮಂದಿ ಬಿಜೆಪಿ ಹಾಗೂ  ಇತರ ಪಕ್ಷಗಳ ಅಭ್ಯರ್ಥಿಗಳಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ನಾಗಲ್ಯಾಂಡ್ ಸೇರಿದಂತೆ ಮೇಘಾಲಯ ವಿಧಾನಸಭೆಗೆ ಇದೇ ತಿಂಗಳ 27 ರಂದು ಚುನಾವಣೆ ನಡೆಯಲಿದೆ. ಇಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಫೆಬ್ರುವರಿ 12ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ಅಸ್ಸಾಂ, ಮಣಿಪುರ ಹಾಗೂ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರವಿದ್ದು, ಈ ತಿಂಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆ ಗೆಲುವಿಗಾಗಿ ಶತಪ್ರಯತ್ನ ನಡೆಸುತ್ತಿದೆ. 

ಪ್ರಾದೇಶಿಕ ಪಕ್ಷಗಳಾದ ಯುಡಿಪಿ ಮತ್ತು ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ , ಮೈತ್ರಿಮಾಡಿಕೊಂಡಿದ್ದು, ಜನ ಬೆಂಬಲಿಸುವ ವಿಶ್ವಾಸದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com