ವರದಿಯಲ್ಲಿರುವಂತೆ ಕಳೆದ ಒಂದು ತಿಂಗಳ ಹಿಂದೆಯೇ ಐಎಸ್ ಐ ಮಹಿಳಾ ಏಜೆಂಟ್ ಅರುಣ್ ಮರ್ವಾಹ್ ಅವರನ್ನು ಸಂಪರ್ಕ ಮಾಡಿದ್ದು, ಅಂದಿನಿಂದ ಸತತವಾಗಿ ವಾಟ್ಸಪ್ ಮೂಲಕ ಚಾಟಿಂಗ್ ನಡೆಸುತ್ತಿದ್ದರಂತೆ. ಕೇವಲ ಮಾಹಿತಿ ವಿನಿಮಯ ಮಾತ್ರವಲ್ಲದೇ ತೀರಾ ವೈಯುಕ್ತಿಕ ಲೈಂಗಿಕ ಸಂದೇಶಗಳನ್ನೂ ಕೂಡ ಇಬ್ಬರು ಪರಸ್ಪರ ವಿನಿಮಿಯ ಮಾಡಿಕೊಂಡಿರುವ ಸಂಗತಿ ಕೂಡ ಬಯಲಾಗಿದೆ. ಅರುಣ್ ಮರ್ವಾಹ್ ಅವರ ನಂಬಿಕೆ ಗಳಿಸಿದ ಮಹಿಳಾ ಐಎಸ್ ಐ ಏಜೆಂಟ್ ನಿಧಾನವಾಗಿ ಭಾರತೀಯ ಸೇನೆಯ ಮಾಹಿತಿಗಳನ್ನು ಕಲೆಹಾಕಲು ಆರಂಭಿಸಿದ್ದು, ಪ್ರಮುಖವಾಗಿ ಸೇನೆಯ ಗೌಪ್ಯ ದಾಖಲೆಗಳ ಕುರಿತು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.