ಸಂಗ್ರಹ ಚಿತ್ರ
ದೇಶ
ಯುವತಿಯರು ಬಿಯರ್ ಕುಡಿಯುವ ಕುರಿತ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಗೋವಾ ಸಿಎಂ ಪರಿಕ್ಕರ್
ಯವತಿಯರು ಬಿಯರ್ ಕುಡಿಯುವ ಕುರಿತು ತಾವು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಆರ್ಥೈಸಲಾಗುತ್ತಿದೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಪಣಜಿ: ಯವತಿಯರು ಬಿಯರ್ ಕುಡಿಯುವ ಕುರಿತು ತಾವು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಆರ್ಥೈಸಲಾಗುತ್ತಿದೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಪರಿಕ್ಕರ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಪರಿಕ್ಕರ್ ಅವರು, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಖಾ ಸುಮ್ಮನೆ ನನ್ನ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
"ನನ್ನ ಹೇಳಿಕೆ ಸಂಬಂಧ ನಾನು ಕೆಲ ಮಾಧ್ಯಮಗಳ ವರದಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಮಾಹಿತಿ ನೋಡಿದ್ದು, ಇಲ್ಲಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಯುವತಿಯರು ಬಿಯರ್ ಕುಡಿಯುವುದು ಕಳವಳಕಾರಿ ಬೆಳವಣಿಗೆ ಎಂದು ನಾನು ಹೇಳಿದ್ದೆ. ಆದರೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಆತಂಕ ಮತ್ತು ಭಯ ಎಂದೆಲ್ಲ ಬಂಬಿಸಲಾಗುತ್ತಿದೆ. ನನ್ನ ಜನರ ಬಗ್ಗೆ ನಾನು ಚಿಂತಿಸಬಾರದೇ.. ನಾನು ಒಂದು ರಾಜ್ಯದ ಮುಖ್ಯಮಂತ್ರಿ.. ನನ್ನ ರಾಜ್ಯದ ಜನರ ಆಗುಹೋಗಗಳ ಕುರಿತು ನನಗೆ ಖಂಡಿತಾ ಕಳವಳ ಇರಬೇಕು. ಇದನ್ನೇ ನಾನು ಹೇಳಿದ್ದೆ, ಆದರೆ ಅದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ.
ನನ್ನ ಜನರ ಬಗ್ಗೆ ನಾನು ಚಿಂತಿಸಬಾರದೇ..ತನ್ನ ಜನಪ ಬಗ್ಗೆ ಚಿಂತೆ ಮಾಡುವ ಮೂಲಭೂತ ಹಕ್ಕು ದೇಶದ ಪ್ರತಿಯೊಬ್ಬ ನಾಗರೀಕನಿಗೂ ಇದೆ. ಇದನ್ನು ತಪ್ಪಾಗಿ ಆರ್ಥೈಸುವುದು ಬೇಡ ಎಂದು ಪರಿಕ್ಕರ್ ಮನವಿ ಮಾಡಿಕೊಂಡರು.
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪರಿಕ್ಕರ್ ಯುವತಿಯರಲ್ಲಿನ ಬಿಯರ್ ಕುಡಿಯುವ ಹವ್ಯಾಸದ ಕುರಿತು ಮಾತನಾಡಿ ಚರ್ಚೆಗೆ ಕಾರಣರಾಗಿದ್ದರು. ಪರಿಕ್ಕರ್ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ