ಮಹಿಳೆಯರಿಗೆ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆ ನೀಡಲು ಅವಕಾಶ ಸಿಗುತ್ತಿಲ್ಲ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯು

ಮಹಿಳೆಯರಿಗೆ ಅವರ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆ ನೀಡಲು ಅವಕಾಶ ಸಿಗುತ್ತಿಲ್ಲ ಎಂದು ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯು ಅಭಿಪ್ರಾಯಪಟ್ಟಿದ್ದಾರೆ.
ಜಸ್ಟಿನ್ ಟ್ರುಡಿಯು
ಜಸ್ಟಿನ್ ಟ್ರುಡಿಯು
ಅಹ್ಮದಾಬಾದ್: ಮಹಿಳೆಯರಿಗೆ ಅವರ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆ ನೀಡಲು ಅವಕಾಶ ಸಿಗುತ್ತಿಲ್ಲ ಎಂದು ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯು ಅಭಿಪ್ರಾಯಪಟ್ಟಿದ್ದಾರೆ. 
ತಮ್ಮನ್ನು ತಾವು ಮಹಿಳಾವಾದಿ ಎಂದು ಕರೆದುಕೊಂಡಿರುವ ಟ್ರುಡಿಯು, ವೈವಿಧ್ಯಮಯ ಸಮಾಜ ನ್ಯೂ ರಿಯಾಲಿಟಿ ಆಗಿದ್ದು, ವಿವಿಧತೆಯನ್ನು ಹೇಗೆ ನಮ್ಮ ಶಕ್ತಿಯನ್ನಾಗಿಸಿಕೊಳ್ಳಬಹುದೆಂಬುದನ್ನು ಅರಿಯುವುದು ಹೊಸ ಸವಾಲು, ಈ ನಿಟ್ಟಿನಲ್ಲಿ ಭಾರತ ಹಾಗೂ ಕೆನಡಾ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮತ್ತಷ್ಟು ಸುಧಾರಣೆ ಕಾಣಾಲಿದೆ ಎಂದು ಹೇಳಿದ್ದಾರೆ. 
ಅಹ್ಮದಾಬಾದ್ ನ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನ ವಿದ್ಯಾರ್ಥಿಗಳನ್ನುದ್ದೇಶಿಸಿ ಟ್ರುಡಿಯು ಮಾತನಾಡಿದ ವೇಳೆ ವಿದ್ಯಾರ್ಥಿಯೊಬ್ಬರು ಜಾಗತಿಕವಾಗಿ ಬೆಳೆಯುತ್ತಿದ್ದು ಓರ್ವ ಜಾಗತಿಕ ನಾಯಕರಾಗಿ ವಿಶ್ವ ಮತ್ತೆ ಜಾಗತೀಕರಣದತ್ತ ಬದಲಾವಣೆ ಮಾಡಲು ಏನು ಮಾಡಲು ಬಯಸುತ್ತೀರಿ ಎಂದು ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿರುವ ಟ್ರುಡಿಯು ವೈವಿಧ್ಯಮಯ ಸಮಾಜ 21 ಶತಮಾನದ ಹೊಸ ವಾಸ್ತವವಾಗಿರಲಿದೆ, ಭಿನ್ನಾಭಿಪ್ರಾಯಗಳನ್ನು ಹೆಚ್ಚು ಎದುರಿಸುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು, ನಾವು ಬೇರೆ ಬೇರೆ ರೀತಿಯ ಹಿನ್ನೆಲೆಯುಳ್ಳ ಜನರನ್ನು ಭೇಟಿಯಾದಾಗ ಸಾಕಷ್ಟು ಕಲಿತು ಬೆಳೆಯುತ್ತೇವೆ ಹಾಗೂ ಸುಧಾರಿತ ಸಮುದಾಯ ನಿರ್ಮಾಣಗೊಳ್ಳುತ್ತದೆ ವಿವಿಧತೆಯನ್ನು ಹೇಗೆ ನಮ್ಮ ಶಕ್ತಿಯನ್ನಾಗಿಸಿಕೊಳ್ಳಬಹುದೆಂಬುದರ ಬಗ್ಗೆ ಚಿಂತನೆ ನಡೆದಿದೆ ಎಂದು ಟ್ರುಡಿಯು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com