ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಮನೆಗೆ ಕಮಲ ಹಾಸನ್ ಭೇಟಿ

ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವುದಕ್ಕೂ ಮುನ್ನ ನಟ ಕಮಲ ಹಾಸನ್ ರಾಮನಾಥಪುರಂ ನಲ್ಲಿರುವ ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ...
ಕಮಲ್ ಹಾಸನ್ ಅವರಿಂದ ಕಲಾಂ ಅವರ ಹಿರಿಯ ಸಹೋದರನ ಭೇಟಿ
ಕಮಲ್ ಹಾಸನ್ ಅವರಿಂದ ಕಲಾಂ ಅವರ ಹಿರಿಯ ಸಹೋದರನ ಭೇಟಿ
Updated on: 
ರಾಮನಾಥಪುರಂ: ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವುದಕ್ಕೂ ಮುನ್ನ ನಟ ಕಮಲ ಹಾಸನ್ ರಾಮನಾಥಪುರಂ ನಲ್ಲಿರುವ ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರ ಮನೆಗೆ ಭೇಟಿ ನೀಡಿ , ಕಲಾಂ ಕುಟುಂಬ ಸದಸ್ಯರ ಜೊತೆ ಉಭಯ ಕುಶಲೋಪರಿ ಹಂಚಿಕೊಂಡರು.
ರಾಮನಾಥಪುರಂ ನಲ್ಲಿರುವ ರಾಮೇಶ್ವರದಲ್ಲಿ ಅಬ್ದುಲ್ ಕಲಾಂ ಅವರ ನಿವಾಸವಿದೆ,ಅಲ್ಲಿ ವಾಸವಿರುವ ಕಲಾಂ ಅವರ ಸಹೋದರ ಮೊಹಮದ್ ಮುತುಮೀರಾ ಲೆಬ್ಬಾಯಿ ಸೇರಿದಂತೆ ಕುಟುಂಬದ ಹಲವರನ್ನು ಕಮಲ್ ಭೇಟಿ ಮಾಡಿದರು.
ಇನ್ನೂ ಪಕ್ಷ ಘೋಷಣೆಗೂ ಮುನ್ನ ಸ್ಥಳೀಯ ಶಾಲೆಯೊಂದಕ್ಕೆ ಭೇಟಿ ನೀಡಲು ಕಮಲ್ ನಿರ್ಧರಿಸಿದ್ದರು, ಆದರೆ ಸ್ಥಳೀಯ ಆಡಳಿತ ಅದಕ್ಕೆ ಅನುಮತಿ ನೀಡಲು ನಿರಾಕರಿಸಿದೆ.ಇಂದು ಮಧುರೈ ನಲ್ಲಿ ಕಮಲ ಹಾಸನ್ ತಮ್ಮ ಹೊಸ ಪಕ್ಷವನ್ನು ಉದ್ಘಾಟಿಸಲಿದ್ದಾರೆ. ನಂತರ ಹಲೆವೆಡೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com