ಕರ್ನಾಟಕ: ರಾಜ್ಯದ ರೂ.2,920 ಕೋಟಿ ಹೆದ್ದಾರಿ ಯೋಜನೆಗೆ ಕೇಂದ್ರ ಒಪ್ಪಿಗೆ

ಕೇಂದ್ರ ಸಚಿವ ಸಂಪುಟವು ಕರ್ನಾಟಕದ ಪ್ರಮುಖ ಹೆದ್ದಾರಿ ಯೋಜನೆಯೊಂದಕ್ಕೆ ಮಂಗಳವಾರ ಅನುಮೋದನೆ ನೀಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಕೇಂದ್ರ ಸಚಿವ ಸಂಪುಟವು ಕರ್ನಾಟಕದ ಪ್ರಮುಖ ಹೆದ್ದಾರಿ ಯೋಜನೆಯೊಂದಕ್ಕೆ ಮಂಗಳವಾರ ಅನುಮೋದನೆ ನೀಡಿದೆ. 
ಬೆಂಗಳೂರು ಹಾಗೂ ಮೈಸೂರು ಸಂಪರ್ಕಿಸುವ ಹೆದ್ದಾರಿ ಸಂಖ್ಯೆ-275ರ ಕೆಲವು ಭಾಗವನ್ನು ಷಟ್ಪಥವಾಗಿ ಪರಿವರ್ತಿಸಲು ಕೇಂದ್ರದಿಂದ ಅನುಮೋದನೆ ದೊರಕಿದ್ದು, ಯೋಜನೆಯ ಒಟ್ಟಾರೆ ವೆಚ್ಚ ರೂ.2,920 ಆಗಿದೆ. 
ನಿಡಫಟ್ಟ-ಮೈಸೂರು ನಡುವೆ ಸುಮಾರಿ 61 ಕಿ.ಮೀ ಅಂತರವಿದೆ. 74.2 ಕಿಮೀ ನಿಂದ 135.3 ಕಿ.ಮೀ ವರೆಗಿನ ಈ ರಸ್ತೆಯನ್ನು 6 ಪಥವಾಗಿ ಬದಲಿಸಲಾಗುತ್ತದೆ ಎಂದು ರಸ್ತೆ ಸಾರಿಗೆ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 
ಹೈಬ್ರಿಡ್ ಎನ್ಯುಟಿ ಮೋಡ್ ವಿಧಾನದಲ್ಲಿ ಹೆದ್ದಾರಿಯನ್ನು ಪರಿವರ್ತಿಸಲಾಗುತ್ತಿದ್ದು, ಯೋಜನೆಯ ನಿಖರ ವೆಚ್ಚ ರೂ.2,919, 81 ಕೋಟಿಗಳು. ಇದರಲ್ಲಿ ಭೂ ಸ್ವಾಧೀನ ವೆಚ್ಚ ಮತ್ತು ನಿರ್ಮಾಣ ಪೂರ್ವ ವೆಚ್ಚಗಳೂ ಸೇರಿವೆ. ಹೆದ್ದಾರಿ ನಿರ್ಮಾಣಕ್ಕೆಂದೇ ರೂ.2,028, 93 ಕೋಟಿ ವೆಚ್ಚವಾಗಲಿದೆ ಎಂದು ಸಚಿವಾಲಯ ತಿಳಿಸಿದೆ. 
ಯೋಜನೆಯಿಂದ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ದೊರಕಲಿದೆ. ಹೆದ್ದಾರಿ ನಿರ್ಮಾಣದ ವೇಳೆ ಸ್ಥಳೀಯವಾಗಿ ರೂ.2.48 ಲಕ್ಷ ಮಾನ ದಿನಗಳಷ್ಚು ಉದ್ಯೋಗ ಸೃಷ್ಟಿಯಾಗಲಿವೆ ಎಂದು ಅದಿ ತಿಳಿಸಿದೆ. 
ಹೆದ್ದಾರಿಯನ್ನು 6 ಪಥಗಳನ್ನಾಗಿ ಪರಿವರ್ತಿಸಲಾಗುತ್ತದೆ ಜೊತೆಗೆ 7 ಮೀ ಸರ್ವೀಸ್ ರಸ್ತೆಯನ್ನು ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣದಲ್ಲಿ ಬೈಪಾಸ್ ರಸ್ತೆಯನ್ನು ನಿರ್ಮಿಸುವ ವೇಳೆ ನಿರ್ಮಾಣ ಮಾಡಲಾಗುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com