ಬ್ಯಾಂಕ್ ಸಾಲ ಪ್ರಕರಣ: ರೊಟೊಮ್ಯಾಕ್ ಮಾಲೀಕ ವಿಕ್ರಮ್ ಕೊಠಾರಿ, ಪುತ್ರನ ಬಂಧನ

ಸುಮಾರು 3,695 ಕೋಟಿ ರೂಪಾಯಿ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೊಟೊಮ್ಯಾಕ್ ಪೆನ್ ಮಾಲೀಕ ವಿಕ್ರಮ್ ಕೊಠಾರಿ ಹಾಗೂ ಪುತ್ರ...
ವಿಕ್ರಮ್ ಕೊಠಾರಿ
ವಿಕ್ರಮ್ ಕೊಠಾರಿ

ನವದೆಹಲಿ: ಸುಮಾರು 3,695 ಕೋಟಿ ರೂಪಾಯಿ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೊಟೊಮ್ಯಾಕ್ ಪೆನ್ ಮಾಲೀಕ ವಿಕ್ರಮ್ ಕೊಠಾರಿ ಹಾಗೂ ಪುತ್ರ ರಾಹುಲ್ ನ್ನು ಸಿಬಿಐ ಬಂಧಿಸಿದೆ.


ವಿಚಾರಣೆಗಾಗಿ ಕೊಠಾರಿ ಹಾಗೂ ರಾಹುಲ್ ಅವರನ್ನು ಸಿಬಿಐ ಕಚೇರಿಗೆ ಕರೆಸಿಕೊಳ್ಳಲಾಗಿತ್ತು, ಆದರೆ ವಿಚಾರಣೆಗೆ ಸಹಕರಿಸದೇ ಇದ್ದುದ್ದರಿಂದ ಇಬ್ಬರನ್ನೂ ಬಂಧಿಸಲಾಗಿದೆ.

ರೊಟೊಮ್ಯಾಕ್ ಪೆನ್ ಸಂಸ್ಥೆಗೆ 7 ರಾಷ್ಟ್ರೀಕೃತ ಬ್ಯಾಂಕ್ ಗಳು ಒಟ್ಟು 2,919 ಕೋಟಿ ರೂಪಾಯಿ ಸಾಲ ನೀಡಿದೆ, 2008 ರಿಂದ ಈ ವರೆಗೂ ಅದು 3,695 ರೂ ಕೋಟಿ ರೂಪಾಯಿಯಷ್ಟಾಗಿದೆ ಈ ಬಗ್ಗೆ ಸಿಬಿಐ ಎಫ್ಐಆರ್ ದಾಖಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com