ಪಿಎನ್‏ಬಿ ಹಗರಣದ ಪರಿಣಾಮ ಭವಿಷ್ಯ ನಿಧಿ ಬಡ್ಡಿದರ ಇಳಿಕೆಯಾಗಿದೆ: ಮಮತಾ ಬ್ಯಾನರ್ಜಿ

ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹಗರಣದಿಂದ ಭವಿಷ್ಯನಿಧಿ ಮೇಲಿನ ಬಡ್ಡಿದರ ಕಡಿಮೆಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ
ಮಮತಾ ಬ್ಯಾನರ್ಜಿ ಚಿತ್ರ
ಮಮತಾ ಬ್ಯಾನರ್ಜಿ ಚಿತ್ರ

ಪಶ್ಚಿಮ ಬಂಗಾಳ: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹಗರಣದ ಪರಿಣಾಮ
ಭವಿಷ್ಯನಿಧಿ ಮೇಲಿನ ಬಡ್ಡಿದರ ಕಡಿಮೆಯಾಗಿದ್ದು,ಕಾರ್ಮಿಕರು  ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ಪಶ್ಚಿಮ ಬಂಗಾಳ  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಜನರ ಜೀಬಿನಿಂದ ಹಣ ಕಸಿದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಳೆದುಕೊಂಡಿರುವ 11.400 ಕೋಟಿ ರೂ ನಷ್ಟವನ್ನು ಭರಿಸಲಾಗುತ್ತಿದೆ ಎಂದು ಅವರು  ಕೇಂದ್ರಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.

ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ 2014ರಲ್ಲಿ ಭವಿಷ್ಯದರ ಮೇಲಿನ ಬಡ್ಡಿದರ ಶೇ. 8.82 ರಷ್ಟಿತ್ತು. ಆದರೆ, ಇದೀಗ ಇದು ಶೇ. 8.55ಕ್ಕೆ ಕುಸಿದಿದ್ದು, ಕಾರ್ಮಿಕರಿಗೆ ತುಂಬಾ ಅನ್ಯಾಯವಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

2017-18 ನೇ ಸಾಲಿನಲ್ಲಿದ್ದ ಆರು ಕೋಟಿ ಗ್ರಾಹಕರ ಶೇ. 8.65 ರಷ್ಟು ಬಡ್ಡಿದರವನ್ನು ಪ್ರಸಕ್ತ ಸಾಲಿನಲ್ಲಿ ಶೇ.8.55ಕ್ಕೆ ನೌಕರರ ಭವಿಷ್ಯನಿಧಿ ಸಂಘಟನೆ ನಿನ್ನೆಯಷ್ಟೇ ಕಡಿತ ಮಾಡಿತ್ತು.

ಹಿರಿಯ ನಾಗರಿಕರು ಹೊಂದಿರುವ ಸಣ್ಣ ಉಳಿತಾಯ ಖಾತೆಯಲ್ಲಿನ ಬಡ್ಡಿದರನ್ನು  ಕಡಿಮೆ ಮಾಡಲಾಗಿದೆ ರೈತರು ಹಾಗೂ ಸಾರ್ವಜನಿಕರ ಹಣ ದೋಚುವುದು ಬಿಜೆಪಿಯ ನೀತಿಯಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com