ಉತ್ತರಪ್ರದೇಶದಲ್ಲಿ ಕೇಸರಿಮಯ; ಸಿಎಂ ಯೋಗಿ ಭೇಟಿ ಹಿನ್ನಲೆಯಲ್ಲಿ ಮಥುರಾ ಗೋಡೆಗಳಲ್ಲಿ ರಾರಾಜಿಸುತ್ತಿದೆ ಕೇಸರಿ!

ಉತ್ತರಪ್ರದೇಶ ರಾಜ್ಯದಲ್ಲಿ ಕೇಸರಕ್ರಾಂತಿ ಮುಂದುವರೆದಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮಥುರಾ ರಾಜ್ಯದ ಗೋಡೆಗಳಿಗೆ ಕೇಸರಿ ಬಣ್ಣವನ್ನು ಬಳಿಯಲಾಗುತ್ತಿದೆ...
ಉತ್ತರಪ್ರದೇಶದಲ್ಲಿ ಕೇಸರಿಮಯ; ಸಿಎಂ ಯೋಗಿ ಭೇಟಿ ಹಿನ್ನಲೆಯಲ್ಲಿ ಮಥುರಾ ಗೋಡೆಗಳಲ್ಲಿ ರಾರಾಜಿಸುತ್ತಿದೆ ಕೇಸರಿ!
ಉತ್ತರಪ್ರದೇಶದಲ್ಲಿ ಕೇಸರಿಮಯ; ಸಿಎಂ ಯೋಗಿ ಭೇಟಿ ಹಿನ್ನಲೆಯಲ್ಲಿ ಮಥುರಾ ಗೋಡೆಗಳಲ್ಲಿ ರಾರಾಜಿಸುತ್ತಿದೆ ಕೇಸರಿ!
ಮಥುರಾ: ಉತ್ತರಪ್ರದೇಶ ರಾಜ್ಯದಲ್ಲಿ ಕೇಸರಕ್ರಾಂತಿ ಮುಂದುವರೆದಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮಥುರಾ ರಾಜ್ಯದ ಗೋಡೆಗಳಿಗೆ ಕೇಸರಿ ಬಣ್ಣವನ್ನು ಬಳಿಯಲಾಗುತ್ತಿದೆ. 
ಹೋಳಿ ಹಬ್ಬಕ್ಕೂ ಮುನ್ನ ಭಾರತದ ಕೆಲವೆಡೆ ಆಚರಣೆಗೊಳ್ಳುವ ಲತ್ಮಾರ್ ಹೋಳಿಗೆ ಎಲ್ಲೆಡೆ ಭರದ ಸಿದ್ಧತೆಗಳು ನಡೆಯುತ್ತಿವೆ. ಮಥುರಾದಲ್ಲಿ ಈ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಹಬ್ಬಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಅವರು ಫೆ.24ರಂದು ಆಗಮಿಸಲಿದ್ದು, ಈ ಹಿನ್ನಲೆಯಲ್ಲಿ ಗೋಡೆಗಳಿಗೆ ಕೇಸರಿ ಬಣ್ಣವನ್ನು ಹಚ್ಚಲಾಗುತ್ತಿದೆ ಎಂದು ತಿಳಿದುಬಂದಿದೆ. 
ಯೋಗಿ ಆದಿತ್ಯನಾಥ್ ಅವರು ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಎಲ್ಲೆಡೆ ಕೇಸರಿ ಬಣ್ಣ ರಾರಾಜಿಸುತ್ತಿರುವುದು ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. ಹಿಂದುತ್ವವನ್ನು ಎಲ್ಲರ ಮೇಲೂ ಒತ್ತಾಯ ಪೂರ್ವಕವಾಗಿ ಹೇರಲಾಗುತ್ತಿದೆ ಎಂಬ ಆರೋಪಗಳು ಯೋಗಿ ಆದಿತ್ಯನಾಥ್ ಅವರ ಮೇಲೆ ಕೇಳಿ ಬರತೊಡಗಿವೆ. 
ಕೆಲ ದಿನಗಳ ಹಿಂದಷ್ಟೇ ಲಖನೌ ಮಸೀದಿಯ ಹೊರಾಂಗಣ ಗೋಡೆಗಳಿಗೂ ಕೇಸರಿ ಬಣ್ಣವನ್ನು ಬಳಿಯಲಾಗಿತ್ತು. ಇದಕ್ಕೆ ಹಲವು ಟೀಕೆಗಳೂ ಕೂಡ ವ್ಯಕ್ತವಾಗಿದ್ದವು. ಇದೀಗ ಮತ್ತೆ ಮಥುರಾದ ಗೋಡೆಗಳಿಗೂ ಕೇಸರಿ ಬಣ್ಣವನ್ನು ಹಚ್ಚುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. 
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಅಧಿಕಾರಿಗಳು, ಹಬ್ಬದ ಹಿನ್ನಲೆಯಲ್ಲಿ ನಗರವನ್ನು ಸ್ವಚ್ಛಗೊಳಿಸಲಾಗುತ್ತಿದೆ. ನಗರ ಪಂಚಾಯತ್ ಎಲ್ಲಾ ರೀತಿಯ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ. ಪ್ರತೀ ವರ್ಷ ನಾವು ಬಣ್ಣಗಳ ಹಬ್ಬದ ಹೋಳಿಯನ್ನು ಆಚರಿಸುತ್ತೇವೆ. ಈ ವರ್ಷ ನಾವು ಕೇಸರಿ ಬಣ್ಣವನ್ನು ಹಚ್ಚಲಾಗುತ್ತಿದೆ. ಹಬ್ಬವನ್ನು ನಮ್ಮೊಂದಿಗೆ ಆಚರಿಸಲು ಮುಖ್ಯಮಂತ್ರಿಗಳು ಬರುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com