ಖ್ಯಾತ ಪತ್ರಕರ್ತ ನೀಲಭ್ ಮಿಶ್ರಾ ನಿಧನ

ಖ್ಯಾತ ಪತ್ರಕರ್ತ ನೀಲಭ್ ಮಿಶ್ರಾ ಅವರು ಶನಿವಾರ ನಿಧನರಾಗಿದ್ದು, ಅವರಿಗೆ 57 ವರ್ಷ ವಯಸ್ಸಾಗಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ಖ್ಯಾತ ಪತ್ರಕರ್ತ ನೀಲಭ್ ಮಿಶ್ರಾ ಅವರು ಶನಿವಾರ ನಿಧನರಾಗಿದ್ದು, ಅವರಿಗೆ 57 ವರ್ಷ ವಯಸ್ಸಾಗಿತ್ತು.
ನ್ಯಾಷನಲ್ ಹೆರಾಲ್ಡ್ ಮತ್ತು ನವಜೀವನ ಪತ್ರಿಕೆಗಳ ಸಾರಥ್ಯ ವಹಿಸಿದ್ದ ನೀಲಭ್ ಮಿಶ್ರಾ ಅವರು ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಮೂಲಗಳ ಪ್ರಕಾರ ಲಿವರ್ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ನೀಲಭ್ ಮಿಶ್ರಾ ಇತ್ತೀಚೆಗೆ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವೇ ದಿನಗಳ ಹಿಂದಷ್ಟೇ ಅವರು ಮನೆಗೆ ತೆಳಿದ್ದರಾದರೂ ಇಂದು ಅವರು ಸಾವನ್ನಪ್ಪಿದ್ದಾರೆ.
ಆಸ್ಪತ್ರೆ ಮೂಲಗಳು ತಿಳಿಸಿರುವಂತೆ ನೀಲಭ್ ಮಿಶ್ರಾ ಅವರು ಬಹುಆಂಗಾಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ನೀಲಭ್ ಮಿಶ್ರಾ ಭಾರತ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರೂ ಅವರು 1938ರಲ್ಲಿ ಸ್ಥಾಪಿಸಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ನವಜೀವನ್ ಎಂಬ ಪತ್ರಿಕೆಯಲ್ಲೂ ಸೇವೆ ಸಲ್ಲಿಸಿದ್ದ ನೀಲಭ್ ಮಿಶ್ರಾ, ಇತ್ತೀಚೆಗೆ ಅಂದರೆ 2017 ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ರೀ ಲಾಂಚ್ ಮಾಡಿದ್ದರು. 
ಇದಕ್ಕೂ ಮೊದಲು ನೀಲಭ್, ಔಟ್ ಲುಕ್ ಹಿಂದಿ ಪತ್ರಿಕೆಯಲ್ಲಿ ಸುಮಾರು ವರ್ಷಗಳ ಸೇವೆ ಸಲ್ಲಿಸಿದ್ದರು. ದೆಹಲಿ ವಿವಿಯಲ್ಲಿ ಇಂಗ್ಲೀಷ್ ಎಂಎ ಪದವಿ ಪಡೆದಿದ್ದೆ ನೀಲಭ್, ನವಭಾರತ್ ಪತ್ರಿಕೆಯಲ್ಲಿ ವರದಿಗಾರರಾಗಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಪಾಟ್ನಾ ಮೂಲದವರಾದ ನೀಲಭ್ ಬಳಿಕ ನ್ಯೂಸ್ ಟೈಮ್ ಪತ್ರಿಕೆಗೆ ರಾಜಸ್ತಾನದ ಜೈಪುರ ವರದಿಗಾರರಾಗಿದ್ದರು. ಅಂತೆಯೇ 1998ರಲ್ಲಿ ಈನಾಡು ಟಿವಿ ರಾಜಸ್ತಾನದಲ್ಲಿ ಸೇವೆ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com