ಪಾಕ್ ರಾಯಭಾರಿ ಅಮಿತ್ ಜುಬೈರ್ ನಿಂದ ಉಗ್ರದಾಳಿಗೆ ಯೋಜನೆ: ಎನ್ಐಎ
ಶ್ರೀಲಂಕಾದಲ್ಲಿನ ಪಾಕಿಸ್ತಾನದ ಹೈಕಮಿಷನ್ ನಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ ಗುಪ್ತಚರ ಇಲಾಖೆ ಅಧಿಕಾರಿ ಜುಬೈರ್ ಸಿದ್ದಿಕಿ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸುವುದಕ್ಕಾಗಿ ಜನರನ್ನು ತೊಡಿಸಲು ಯೋಜನೆ ರೂಪಿಸಿದ್ದ ಎಂದು ಎನ್ಐಎ ಹೇಳಿದೆ.
ನವದೆಹಲಿ: ಶ್ರೀಲಂಕಾದಲ್ಲಿನ ಪಾಕಿಸ್ತಾನದ ಹೈಕಮಿಷನ್ ನಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ ಗುಪ್ತಚರ ಇಲಾಖೆ ಅಧಿಕಾರಿ ಜುಬೈರ್ ಸಿದ್ದಿಕಿ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸುವುದಕ್ಕಾಗಿ ಜನರನ್ನು ತೊಡಿಸಲು ಯೋಜನೆ ರೂಪಿಸಿದ್ದ ಎಂದು ಎನ್ಐಎ ಹೇಳಿದೆ.
2014 ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ದಾಖಲಿಸಿರುವ ಎನ್ಐಎ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಚೆನ್ನೈ ನ ವಿಶೇಷ ನ್ಯಾಯಾಲಯಕ್ಕೆ ಎನ್ಐಎ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ್ದು
2009-2016 ರ ಅವಧಿಯಲ್ಲಿ ಕೊಲಂಬೋದಲ್ಲಿರುವ ಪಾಕಿಸ್ತಾನದ ಹೈಕಮಿಷನ್ ನಲ್ಲಿ ಸಿದ್ದಿಕಿ ಕಾರ್ಯನಿರ್ವಹಿಸುತ್ತಿದ್ದಾಗ ಚೆನ್ನೈ ನ ಇಬ್ಬರು ನಾಗರಿಕರೊಂದಿಗೆ ಸೇರಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ಎಂದು ಚಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ.
ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದಷ್ಟೇ ಅಲ್ಲದೇ ಹೆಚ್ಚು ಮೌಲ್ಯದ ನಕಲಿ ಭಾರತೀಯ ಕರೆನ್ಸಿಯನ್ನು ವಹಿವಾಟು ನಡೆಸಿದ ಚೆನ್ನೈ ನ ನಾಗರಿಕರು ಹಾಗೂ ಸಿದ್ದಿಕಿ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿದೆ.