ಮೃತ ಮಕ್ಕಳು
ದೇಶ
ಶಾಲೆಗೆ ನುಗ್ಗಿದ ಎಸ್‌ಯುವಿ ಕಾರು: 9 ಮಕ್ಕಳ ದುರ್ಮರಣ, 20ಕ್ಕೂ ಹೆಚ್ಚು ಗಂಭೀರ ಗಾಯ
ಎಸ್‌ಯುವಿ ಕಾರೊಂದು ನಿಯಂತ್ರಣ ತಪ್ಪಿ ಸರ್ಕಾರಿ ಶಾಲೆಗೆ ನುಗ್ಗಿದ ಪರಿಣಾಮ 9 ಮಂದಿ ಮಕ್ಕಳು ದಾರುಣ ಸಾವನ್ನಪ್ಪಿರುವ ಘಟನೆ ಮೀನಾಪುರದ...
ಮುಜಾಫರಪುರ್(ಬಿಹಾರ): ಎಸ್‌ಯುವಿ ಕಾರೊಂದು ನಿಯಂತ್ರಣ ತಪ್ಪಿ ಸರ್ಕಾರಿ ಶಾಲೆಗೆ ನುಗ್ಗಿದ ಪರಿಣಾಮ 9 ಮಂದಿ ಮಕ್ಕಳು ದಾರುಣ ಸಾವನ್ನಪ್ಪಿರುವ ಘಟನೆ ಮೀನಾಪುರದ ಧರ್ಮಪುರದಲ್ಲಿ ಸಂಭವಿಸಿದೆ.
ಶನಿವಾರವಾದ್ದರಿಂದ ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ತೆರಳಲು ಮಕ್ಕಳು ಸಿದ್ಧವಾಗಿರುವ ವೇಳೆ ಈ ದುರಂತ ಸಂಭವಿಸಿದ್ದು ಅಪಘಾತದಲ್ಲಿ ಸ್ಥಳದಲ್ಲೇ 9 ಮಂದಿ ಅನುನೀಗಿದ್ದು 20ಕ್ಕೂ ಹೆಚ್ಚು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡಿರುವ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿ ಎಂದು ತಿಳಿದುಬಂದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಕಾರು ಚಾಲಕ ಕಂಠ ಪೂರ್ತಿ ಮಧ್ಯ ಸೇವಿಸಿದ್ದ ಎನ್ನಲಾಗಿದೆ.
ಮೃತ ಶಾಲಾ ಮಕ್ಕಳ ಕುಟುಂಬಕ್ಕೆ ಬಿಹಾರ ಸರ್ಕಾರ ತಲಾ 4 ಲಕ್ಷ ರುಪಾಯಿ ಪರಿಹಾರ ಘೋಷಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ