ಪತ್ನಿಯ ಅನೈತಿಕ ಸಂಬಂಧ: ಪತ್ನಿ, ಮಕ್ಕಳಿಬ್ಬರ ಕತ್ತು ಸೀಳಿ, ಆತ್ಮಹತ್ಯೆಗೆ ಶರಣಾದ ಪತಿ

ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತು 40 ವರ್ಷದ ವ್ಯಕ್ತಿಯೋರ್ವ ಪತ್ನಿ ಹಾಗೂ ತನ್ನ ಇಬ್ಬರು ಮಕ್ಕಳ ಕತ್ತು ಸೀಳಿ ನಂತರ ತಾನು ನೇಣು ಬಿಗಿದುಕೊಂಡು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸೋನಿಪತ್: ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತು 40 ವರ್ಷದ ವ್ಯಕ್ತಿಯೋರ್ವ ಪತ್ನಿ ಹಾಗೂ ತನ್ನ ಇಬ್ಬರು ಮಕ್ಕಳ ಕತ್ತು ಸೀಳಿ ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಹರಿಯಾಣದಲ್ಲಿ ನಡೆದಿದೆ. 
ಘಟನಾ ಸ್ಥಳದಲ್ಲಿ ಸೂಸೈಡ್ ನೋಟ್ ಸಿಕ್ಕಿದ್ದು ಅದರಲ್ಲಿ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಬರೆಯಲಾಗಿದೆ. ಮೃತರನ್ನು 40 ವರ್ಷ ಸತೀಶ್ ಪತ್ನಿ 38 ವರ್ಷದ ಜ್ಯೋತಿ, ಮಕ್ಕಳಾದ 14 ವರ್ಷದ ಅಕ್ಷಯ್ ಮತ್ತು 12 ವರ್ಷದ ಆರ್ಯನ್ ಎಂದು ಗುರುತಿಸಲಾಗಿದೆ. 
ಶನಿವಾರ ಬೆಳಗ್ಗೆ ಈ ಘಟನೆ ನಡೆಸಿದ್ದು ಹೆಚ್ಚುವರಿ ತರಗತಿಗಾಗಿ ಶನಿವಾರ ಹುಡುಗರ ಹೊರಹೋಗದ್ದನ್ನು ಕಂಡ  ನೆರೆಮನೆಯವರು ಸತೀಶ್ ಸಹೋದರನಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಪೊಲೀಸರಿಗೆ ಮಾಹಿತಿ ಸಿಕ್ಕಿದ್ದರಿಂದ ಘಟನಾ ಸ್ಥಳಕ್ಕೆ ಬಂದ ಪೊಲೀಸರು  ಸಹೋದರ ಪ್ರವೀಣ್ ಸಹಾಯದೊಂದಿಗೆ ಮನೆಯ ಬಾಗಿಲನ್ನು ಹೊಡೆದು ಒಳನುಗ್ಗಿದಾಗ ಘಟನೆ ಬೆಳಕಿಗೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com