
ದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಆಭರಣ ಉದ್ಯಮಿ ನೀರವ್ ಮೋದಿ ,ಮೆಹುಲ್ ಚೋಕ್ಸಿಯ ಮತ್ತಷ್ಟು ಹಗರಣಗಳನ್ನು ಪತ್ತೆ ಹಚ್ಚಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾತ್ರವಲ್ಲದೇ ಇತರ 16 ಬ್ಯಾಂಕುಗಳಲ್ಲಿ ಇವರಿಬ್ಬರು ಸಾಲ ಪಡೆದಿದ್ದು, ಬ್ಯಾಂಕುಗಳಿಗೆ ಸುಮಾರು 20 ಸಾವಿರ ಕೋಟಿ ರೂ. ನಷ್ಟು ನಷ್ಟವಾಗಿದೆ ಎಂದು ಇಡಿ ಹೇಳಿದೆ.
ಈ ಸಂಬಂಧ ಇಡಿ ನಿರ್ದೇಶಕ ಕರ್ನಾಲ್ ಸಿಂಗ್ ಬ್ಯಾಂಕುಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ಸಾಲದ ಬಗ್ಗೆ ಮಾತ್ರ ಮಾಹಿತಿ
ಪಡೆಯಲಾಗುತ್ತಿದೆ ಆದರೆ, ದೂರು ಸಲ್ಲಿಸುವಂತೆ ಬ್ಯಾಂಕುಗಳಿಗೆ ತಿಳಿಸಿಲ್ಲ ಎಂದು ಅವರು ಹೇಳಿದ್ದಾರೆ.
16 ಬ್ಯಾಂಕುಗಳಲ್ಲಿ 5 ಸಾವಿರದಿಂದ 10 ಸಾವಿರ ಕೋಟಿ ರೂ. ನಷ್ಟು ನೀರವ್ ಮೋದಿ, ಮೆಹುಲ್ ಚೋಕ್ಸಿ ಸಾಲ ಪಡೆದಿರುವ ಸಾಧ್ಯತೆಯಿದ್ದು,
ಈ ನಿಟ್ಟಿನಲ್ಲಿ ಸಿಬಿಐ ಹಾಗೂ ಇಡಿ ತನಿಖೆ ಕೈಗೊಂಡಿವೆ.
ಬ್ಯಾಂಕುಗಳಿಂದ ತೆಗೆದುಕೊಂಡಿರುವ ಸಾಲವನ್ನು ಬೇಗನೆ ಹಿಂದಿರುಗಿಸುವಂತೆ ಆರೋಪಿಗಳಿಗೆ ಸರ್ಕಾರ ತಿಳಿಸಿದೆ. ಅಲ್ಲದೇ ನೀರವ್ ಮೋದಿ ಪಾಸ್ ಪೋರ್ಟ್ ನ್ನು ಅಮಾನತುಪಡಿಸಲಾಗಿದೆ.
Advertisement