ಉತ್ತರಪ್ರದೇಶ: ಎಲ್ಇಟಿ ಸೇರ್ಪಡೆಗೊಳ್ಳುವಂತೆ ವಾಟ್ಸ್ ಅಪ್ ಬಳಕೆದಾರನಿಗೆ ಆಹ್ವಾನ, ದೂರು ದಾಖಲು

ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳುವಂತೆ ಉತ್ತರಪ್ರದೇಶದ ವಾಟ್ಸ್ ಅಪ್ ಬಳಕೆದಾರನೊಬ್ಬನಿಗೆ ಆಹ್ವಾನ ಬಂದಿದ್ದು, ಈ ಸಂಬಂಧ ಲಖನೌ ಸೈಬರ್ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಸೋಮವಾರ ತಿಳಿದುಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಖನೌ: ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳುವಂತೆ ಉತ್ತರಪ್ರದೇಶದ ವಾಟ್ಸ್ ಅಪ್ ಬಳಕೆದಾರನೊಬ್ಬನಿಗೆ ಆಹ್ವಾನ ಬಂದಿದ್ದು, ಈ ಸಂಬಂಧ ಲಖನೌ ಸೈಬರ್ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಸೋಮವಾರ ತಿಳಿದುಬಂದಿದೆ. 
ವಾಟ್ಸ್ ಅಪ್ ಗ್ರೂಪಿನ ಹೆಸರು ಲಷ್ಕರ್-ಇ-ತೊಯ್ಬಾ ಎಂದು ಇದ್ದು, ಈ ಗ್ರೂಪ್'ನ್ನು ರಾಜಸ್ತಾನದ ಭಿಲ್ವಾಡಾದಲ್ಲಿರುವ 9ನೇ ತರಗತಿ ವಿದ್ಯಾರ್ಥಿಯೊಬ್ಬ ಆರಂಭಿಸಿದ್ದಾರೆಂದು ಹೇಳಲಾಗುತ್ತಿದೆ. 
ತಮ್ಮ ಮೊಬೈಲ್ ಸಂಖ್ಯೆಗೆ ಈ ರೀತಿಯ ಮೇಸೇಜ್ ರಿಕ್ವೆಸ್ಟ್ ಬರುತ್ತಿದ್ದಂತೆಯೇ ಗಾಬರಿಗೊಂಡಿರುವ ಯುವಕ ಕೂಡಲೇ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿದ್ದಾರೆ. ಈ ವೇಳೆ ಎಚ್ಚೆತ್ತ ಉಗ್ರ ನಿಗ್ರಹ ಪಡೆ ತನಿಖೆ ಆರಂಭಿಸಿದೆ ಎಂದು ವರದಿಗಳು ತಿಳಿಸಿವೆ. 
ಎಲ್ಇಟಿಗೆ ಸೇರ್ಪಡೆಗೊಳ್ಳುವಂತೆ ಸಂದೇಶವನ್ನು ಪಡೆದ ವ್ಯಕ್ತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣವನ್ನು ಸೈಬರ್ ಅಪರಾಧ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆಂದು ಉತ್ತರಪ್ರದೇಶ ಪೊಲೀಸರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com