ಬಂಧಿತ ಆರೋಪಿ ಮನೋಜ್ ಬೈತಾ
ದೇಶ
ಮುಜಾಫರ್ ಪುರ ಹಿಟ್ ಅಂಡ್ ರನ್ ಕೇಸ್: ಬಿಜೆಪಿ ಮುಖಂಡ ಮನೋಜ್ ಬೈತಾ ಶರಣಾಗತಿ
ಶಾಲೆಯೊಂದಕ್ಕೆ ವಾಹನ ನುಗ್ಗಿಸಿ 9ಮಕ್ಕಳ ಸಾವಿಗೆ ಕಾರಣರಾದ ಬಿಜೆಪಿ ಮುಖಂಡ ಮನೋಜ್ ಬೈತಾ ಪೊಲೀಸರಿಗೆ ಶರಣಾಗಿದ್ದಾರೆ....
ಪಾಟ್ನಾ: ಶಾಲೆಯೊಂದಕ್ಕೆ ವಾಹನ ನುಗ್ಗಿಸಿ 9ಮಕ್ಕಳ ಸಾವಿಗೆ ಕಾರಣರಾದ ಬಿಜೆಪಿ ಮುಖಂಡ ಮನೋಜ್ ಬೈತಾ ಪೊಲೀಸರಿಗೆ ಶರಣಾಗಿದ್ದಾರೆ.
ಅಪಘಾತದಿಂದ ಗಾಯಗೊಂಡಿದ್ದ ಮನೋಜ್ ಬೈತಾ ಅವರನ್ನು ಚಿಕಿತ್ಸೆಗಾಗಿ ಶ್ರೀ ಕೃಷ್ಣ ಮೆಡಿಕಲ್ ಕಾಲೇಜ್ ಆಸ್ಪತ್ರೆಯಿಂದ ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ಶನಿವಾರ ಮಧ್ಯಾಹ್ನ ಕುಡಿದ ಮತ್ತಿನಲ್ಲಿ ಶಾಲೆಗೆ ವಾಹನ ನುಗ್ಗಿದ ಪರಿಣಾಮ 8 ರಿಂದ 10 ವರ್ಷದ 9 ಮಕ್ಕಳು ಸಾವನ್ನಪ್ಪಿ, ಹಲವು ಮಕ್ಕಳು ಗಾಯಗೊಂಡಿದ್ದರು.
ಬೈತಾ ಸಿತಾಮರ್ಹಿ ಜಿಲ್ಲೆಯವರಾಗಿದ್ದು, ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ