ಜೋರ್ಡಾನ್-ಭಾರತ ದ್ವಿಪಕ್ಷೀಯ ಮಾತುಕತೆ, ಪ್ಯಾಲಸ್ತೈನ್ ವಿಚಾರದಲ್ಲಿ ಬದ್ದತೆ, ರಕ್ಷಣಾ ಸಹಕಾರ ಸೇರಿ 12 ಒಪ್ಪಂದಗಳಿಗೆ ಸಹಿ

ಭಾರತ ಹಾಗೂ ಜೋರ್ಡಾನ್ ಪ್ಯಾಲಸ್ತೈನ್ ಕುರಿತಂತೆ ಪರಸ್ಪರ ಬೆಂಬಲ, ರಕ್ಷಣಾ ಸಹಕಾರ ಸೇರಿ ಒಟ್ಟು ಹನ್ನೆರಡು ಒಪ್ಪಂದಗಳಿಗೆ ಸಹಿ ಹಾಕಿದೆ.
ಜೋರ್ಡಾನ್-ಭಾರತ ದ್ವಿಪಕ್ಷೀಯ ಮಾತುಕತೆ, ಪ್ಯಾಲಸ್ತೈನ್ ವಿಚಾರದಲ್ಲಿ ಬದ್ದತೆ, ರಕ್ಷಣಾ ಸಹಕಾರ ಸೇರಿ 12 ಒಪ್ಪಂದಗಳಿಗೆ ಸಹಿ
ಜೋರ್ಡಾನ್-ಭಾರತ ದ್ವಿಪಕ್ಷೀಯ ಮಾತುಕತೆ, ಪ್ಯಾಲಸ್ತೈನ್ ವಿಚಾರದಲ್ಲಿ ಬದ್ದತೆ, ರಕ್ಷಣಾ ಸಹಕಾರ ಸೇರಿ 12 ಒಪ್ಪಂದಗಳಿಗೆ ಸಹಿ
ನವದೆಹಲಿ: ಭಾರತ ಹಾಗೂ ಜೋರ್ಡಾನ್ ಪ್ಯಾಲಸ್ತೈನ್ ಕುರಿತಂತೆ ಪರಸ್ಪರ ಬೆಂಬಲ, ರಕ್ಷಣಾ ಸಹಕಾರ  ಸೇರಿ ಒಟ್ಟು ಹನ್ನೆರಡು ಒಪ್ಪಂದಗಳಿಗೆ ಸಹಿ ಹಾಕಿದೆ. ಭಾರತ ಪ್ರವಾಸದಲ್ಲಿರುವ ಜೋರ್ಡಾನ್ ದೊರೆ ಅಬ್ದುಲ್ಲಾ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ದ್ವಿಪಕ್ಷೀಯ ಸಭೆ ನಡೆಸಿದ್ದು ಸಭೆಯ ಬಳಿಕ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಪ್ಯಾಲಸ್ತೈನ್ ಸಂಬಂಧ ಎರಡೂ ರಾಷ್ಟ್ರಗಳು ತಮ್ಮ ಬದ್ದತೆಯನ್ನು ನವೀಕರಿಸಿರುವುದಾಗಿ ಭಾರತ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಎಕನಾಮಿಕ್ ರಿಲೇಶನ್ಸ್) ಟಿಎಸ್ ತಿರುಮೂರ್ತಿ ಮಾದ್ಯಮಕ್ಕೆ ತಿಳಿಸಿದ್ದಾರೆ.
ಕಳೆದ ತಿಂಗಳು ಮೋದಿ ಪ್ಯಾಲೆಸ್ತೈನ್ ಭೇಟಿ ಕಾರ್ಯಕ್ರಮಕ್ಕೆ ಜೋರ್ಡಾನ್ ಸಹಕರಿಸಿತ್ತು. ಮೋದಿ ಪ್ಯಾಲಸ್ತೈನ್ ಗೆ ಭೇತಿ ನೀಡಿದ್ದ ಮೊದಲ ಬಾರತೀಯ ಪ್ರಧಾನಿಯಾಗಿದ್ದಾರೆ.ಮೋದಿ ಅವರ ಈ ಭೇಟಿಯು ಇಸ್ರೇಲ್, ಪ್ಯಾಲಸ್ತೈನ್ ಸಂಪರ್ಕಕ್ಕೆ ಹೊಸ ಮಾರ್ಗ ತೆರೆದುಕೊಟ್ಟಿತ್ತು. ಅಲ್ಲದೆ ಡಿಸೆಂಬರ್ ನಲ್ಲಿ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೆರುಸಲೇಂ ನ್ನು ಇಸ್ರೇಲ್ ರಾಜಧಾನಿ ಎಂದು ಘೋಷಿಸಿದ್ದ ಸಂಬಂಧ ನಡೆದ ಮತದಾನದಲ್ಲಿ ಭಾರತ ಅಮೆರಿಕಾ ನಿಲುವಿನ ವಿರುದ್ಧವಾಗಿ ಮತ ಚಲಾಯಿಸಿತ್ತು. ಈ ಎಲ್ಲಾ ಕಾರಣಗಳಿಂದ ಜೋರ್ಡಾನ್ ಬಾರತದ ಪ್ಯಾಲಸ್ತೈನ್ ನಿಲುವನ್ನು ಬಹುವಾಗಿ ಮೆಚ್ಚಿದೆ ಎಂದು ತಿರುಮೂರ್ತಿ ಹೇಳಿದರು.
ಇನ್ನು ಎರಡೂ ರಾಷ್ಟ್ರಗಳ ನಡುವೆ ವ್ಯಾಪಾರ ಸಹಕಾರವು ಜೋರ್ಡಾನ್ ದೊರೆ ಬಾರತ ಭೇಟಿಯ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಆಫ್ರಿಕಾ ರಾಷ್ಟ್ರಕ್ಕೆ ಸಹಕಾರ ನೀಡುವ ಸಂಬಂಧ ಎರಡೂ ರಾಷ್ಟ್ರಗಳು ಹೊಸ ಸಾಧ್ಯತೆಗಳ ಅನ್ವೇಷಣೆಗೆ ಒಪ್ಪಿಕೊಂಡಿದೆ. ಅಲ್ಲದೆ ಬಾರತವು ಆಫ್ರಿಕಾ ರಾಷ್ಟ್ರದ ಅಭಿವೃದ್ಧಿಯ ಕಾರಣಕ್ಕೆ 10 ಶತಕೋಟಿ ಡಾಲರ್ ಸಾಲವನ್ನು ಬಾರತ ನೀಡುತ್ತದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬುಧವಾರದಂದು ಜೋರ್ಡಾನ್ ದೊರೆ ಆಯ್ದ ಭಾರತೀಯ ಸಿಇಒ ಗಳನ್ನು ಭೇತಿಯಾಗಿದ್ದು ಭಾರತ-ಜೋರ್ಡಾನ್ ವ್ಯವಹಾರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾಗೆಯೇ ಇಂದು (ಗುರುವಾರ) ಎರಡೂ ರಾಷ್ಟ್ರಗಳ ನಾಯಕರು ರಕ್ಷಣಾ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ತಿರುಮೂರ್ತಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com