ಜಯೇಂದ್ರ ಸರಸ್ವತಿ ಸ್ವಾಮೀಜಿ ಇಚ್ಛೆಯಂತೆಯೇ ಕಂಚಿ ಮಠದ ಬೃಂದಾನವನದಲ್ಲೇ ಸಮಾಧಿ
ದೈವಾಧೀನರಾಗಿದ್ದ ಶ್ರೀ ಕಂಚಿ ಕಾಮಕೋಟಿ ಪೀಠಂನ 69ನೇ ಪೀಠಾಧ್ಯಕ್ಷರಾಗಿದ್ದ ಜಯೇಂದ್ರ ಸರಸ್ವತಿ ಅವರ ಪಾರ್ಥೀವ ಶರೀರವನ್ನು ಅವರ ಇಚ್ಛೆಯಂತೆಯೇ ಗುರುವಾರ ಕಂಚಿ ಮಠದಲ್ಲಿಯೇ ಸಮಾಧಿ ಮಾಡಲಾಗಿತು...
ಜಯೇಂದ್ರ ಸರಸ್ವತಿ ಸ್ವಾಮೀಜಿ ಇಚ್ಛೆಯಂತೆಯೇ ಮಠದ ಬೃಂದಾನವನದಲ್ಲೇ ಸಮಾಧಿ
ಚೆನ್ನೈ: ದೈವಾಧೀನರಾಗಿದ್ದ ಶ್ರೀ ಕಂಚಿ ಕಾಮಕೋಟಿ ಪೀಠಂನ 69ನೇ ಪೀಠಾಧ್ಯಕ್ಷರಾಗಿದ್ದ ಜಯೇಂದ್ರ ಸರಸ್ವತಿ ಅವರ ಪಾರ್ಥೀವ ಶರೀರವನ್ನು ಅವರ ಇಚ್ಛೆಯಂತೆಯೇ ಗುರುವಾರ ಕಂಚಿ ಮಠದಲ್ಲಿಯೇ ಸಮಾಧಿ ಮಾಡಲಾಗಿತು.
ಮಠದ ಬೃಂದಾವನದ ಎಡಭಾಗದಲ್ಲಿ ಜಯೇಂದ್ರ ಸರಸ್ವತಿಯವರನ್ನು ಸಕಲ ವಿಧಿವಿಧಾನಗಳೊಂದಿಗೆ ಸಮಾಧಿ ಮಾಡಲಾಯಿತು.
ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿ ಸ್ವಾಮಿಯವರ ಪಾರ್ಥೀವ ಶರೀರವನ್ನು ಕುರ್ಚಿಯಲ್ಲಿ ಸ್ಫಾಪಿಸಿ ಅವರ ಗುರುಗಳಾದ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮೀಜಿ ಸಮಾಧಿ ಸಮೀಪವೇ ಅಂತ್ಯಕ್ರಿಯ ನಡೆಸಲಾಯಿತು.
ಅಂತ್ಯ ಸಂಸ್ಕಾರದಲ್ಲಿ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಕೇಂದ್ರ ಸಚಿವ ಪೊನ್ ರಾಧಾ ಕೃಷ್ಣನ್ ಸೇರಿದಂತೆ ಇತರೆ ಗಣ್ಯರು ಭಾಗಿಯಾಗಿದ್ದರು.