ವೃಂದಾವನದಲ್ಲಿ 'ಹೋಳಿ' ಆಚರಿಸಿದ ವಿದೇಶಿ ಪ್ರಜೆಗಳು

ಹೋಳಿ ಹಬ್ಬಕ್ಕೆ ಇನ್ನು ಒಂದು ದಿನ ಬಾಕಿಯಿದ್ದು, ಬಣ್ಣಗಳ ಹಬ್ಬವನ್ನು ಆಚರಿಸಲು ಕೇವಲ ದೇಶವಷ್ಟೇ ಅಲ್ಲದೆ, ವಿದೇಶಿ ಪ್ರಜೆಗಳು ಕೂಡ ತುದಿಗಾಲಲ್ಲಿ ನಿಂತಿದ್ದಾರೆ...
ವೃಂದಾವನದಲ್ಲಿ 'ಹೋಳಿ' ಆಚರಿಸಿದ ವಿದೇಶಿ ಪ್ರಜೆಗಳು
ವೃಂದಾವನದಲ್ಲಿ 'ಹೋಳಿ' ಆಚರಿಸಿದ ವಿದೇಶಿ ಪ್ರಜೆಗಳು
ವೃಂದಾವನ: ಹೋಳಿ ಹಬ್ಬಕ್ಕೆ ಇನ್ನು ಒಂದು ದಿನ ಬಾಕಿಯಿದ್ದು, ಬಣ್ಣಗಳ ಹಬ್ಬವನ್ನು ಆಚರಿಸಲು ಕೇವಲ ದೇಶವಷ್ಟೇ ಅಲ್ಲದೆ, ವಿದೇಶಿ ಪ್ರಜೆಗಳು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. 
ವೃಂದಾನವು ಉತ್ತರಪ್ರದೇಶದ ಅತ್ಯಂತ ಪವಿತ್ರ ಪಟ್ಟಗಳಲ್ಲಿ ಒಂದು ಪರಿಗಣಿಸಲಾಗುತ್ತದೆ. ಹೋಳಿ ಹಬ್ಬವನ್ನು ಇಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಈ ಹಬ್ಬವನ್ನು ವಾರಕ್ಕೂ ಮೊದಲೇ ಆಚರಿಸಲಾಗುತ್ತದೆ. ಹರಿ ಭಜನೆ, ನೃತ್ಯ, ಬಣ್ಣದಾಟ, ನೀರು, ಹೂವುಗಳು, ಸಿಹಿ ತಿಂಡಿಗಳೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ. 
ಈ ಹಿನ್ನಲೆಯಲ್ಲಿ ಹಬ್ಬದ ಆಚರಣೆಯನ್ನು ನೋಡುವ ಸಲುವಾಗಿ ವಿದೇಶಿ ಪ್ರಜೆಗಳು ಇಲ್ಲಿಗೆ ಆಗಮಿಸುತ್ತಾರೆ. ಇಂದೂ ಕೂಡ ವೃಂದಾವನದಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ವಿದೇಶಿ ಪ್ರಜೆಗಳು ಕೂಡ ಹಬ್ಬವನ್ನು ಆಚರಣೆ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com