ಮಹದಾಯಿ ವಿವಾದ; ಕರ್ನಾಟಕ ತನ್ನ ಪಾಲಿನ ನೀರು ಪಡೆಯುವುದು ಅನಿವಾರ್ಯ: ಗೋವಾ ಸಿಎಂ

ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು ತೀವ್ರ ಟೀಕೆಗೆ....
ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್
ಪಣಜಿ: ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು ತೀವ್ರ ಟೀಕೆಗೆ ಕಾರಣವಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಕರ್ನಾಟಕ ತನ್ನ ಪಾಲಿನ ನೀರು ಪಡೆಯುವುದು ಅನಿವಾರ್ಯವಾಗಿದೆ ಎಂದು ಗುರುವಾರ ಹೇಳಿದ್ದಾರೆ.
ಇಂದು ಸಚಿವಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪರಿಕ್ಕರ್, ಈಗಾಗಲೇ ನೀರಿ ಕೊರತೆ ಎದುರಿಸುತ್ತಿರುವ ಮಹದಾಯಿ ನದಿ ನೀರನ್ನು ಕರ್ನಾಟಕ ಮಲಪ್ರಭಾ ನದಿ ತಿರುಗಿಸಲು ಸಾಧ್ಯವಿಲ್ಲ. ಮಹದಾಯಿ ನ್ಯಾಯಾಧೀಕರಣದಲ್ಲಿ ಗೋವಾ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ ಎಂದರು.
ಕರ್ನಾಟಕ ಮಹದಾಯಿ ನದಿಯಿಂದ ನೀರು ಪಡೆದಿಲ್ಲ ಎಂದು ಯಾರಾದರೂ ಭಾವಿಸಿದರೆ, ಅವರು ಮೂರ್ಖನ ಸ್ವರ್ಗದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರಿಗೆ ಕಾನೂನಿನ ಅರಿವಿಲ್ಲ ಎಂದರ್ಥ ಎಂದು ಗೋವಾ ಸಿಎಂ ಹೇಳಿದ್ದಾರೆ.
ಕರ್ನಾಟಕದಲ್ಲಿ ಹರಿಯುವ ಮಹದಾಯಿ ನೀರನ್ನು ಬಳಸಿಕೊಳ್ಳದಂತೆ ತಡೆಯಲು ಹೇಗೆ ಸಾಧ್ಯ? ಆದರೆ ಅವರು ಆ ನೀರನ್ನು ಮತ್ತೊಂದು ಪ್ರದೇಶಕ್ಕೆ ಹರಿಸುವಂತಿಲ್ಲ. ಅದೇ ಪ್ರದೇಶದಲ್ಲಿ ಅವರು ಕುಡಿಯಲು ಬಳಸಲಿ ಅಥವಾ ಕೃಷಿಗೂ ಬಳಸಲಿ ಎಂದು ಪರಿಕ್ಕರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com