ಶೆರಿನ್ ಮ್ಯಾಥ್ಯೂಸ್ ಸಾವು: ಅಮೆರಿಕ ದತ್ತು ಏಜೆನ್ಸಿ ರದ್ದುಗೊಳಿಸಿದ ಕೇಂದ್ರ ಸರ್ಕಾರ

ಅಮೆರಿಕದಲ್ಲಿ ಭಾರತ ಮೂಲದ ಮೂರು ವರ್ಷದ ಬಾಲಕಿ ಶೆರಿನ್ ಮ್ಯಾಥ್ಯೂಸ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ದತ್ತು ಏಜೆನ್ಸಿಯನ್ನು ಕೇಂದ್ರ ಸರ್ಕಾರ ರದ್ದು ಪಡಿಸಿದೆ...
ಶೆರಿನ್ ಮ್ಯಾಥ್ಯೂಸ್
ಶೆರಿನ್ ಮ್ಯಾಥ್ಯೂಸ್
ನವದೆಹಲಿ: ಅಮೆರಿಕದಲ್ಲಿ ಭಾರತ ಮೂಲದ ಮೂರು ವರ್ಷದ ಬಾಲಕಿ ಶೆರಿನ್ ಮ್ಯಾಥ್ಯೂಸ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ದತ್ತು ಏಜೆನ್ಸಿಯನ್ನು ಕೇಂದ್ರ ಸರ್ಕಾರ ರದ್ದು ಪಡಿಸಿದೆ. 
ಭಾರತೀಯ-ಅಮೆರಿಕನ್ ದಂಪತಿಗಳಾದ ವೆಸ್ಲಿ ಮ್ಯಾಥ್ಯೂಸ್ ಮತ್ತು ಸಿನಿ ಮ್ಯಾಥ್ಯೂಸ್ ಮೂರು ವರ್ಷದ ಬಾಲಕಿ ಶೆರಿನ್ ಮ್ಯಾಥ್ಯೂಸ್ ರನ್ನು ದತ್ತು ಪಡೆದಿದ್ದರು. ಕಳೆದ ಅಕ್ಟೋಬರ್ 6ರಂದು ಶೆರಿನ್ ಮ್ಯಾಥ್ಯೂಸ್ ಳಿಗೆ ಬಲವಂತವಾಗಿ ಹಾಲು ಕುಡಿಸಿ ಮಗುವಿನ ಸಾವಿಗೆ ಪೋಷಕರು ಕಾರಣರಾಗಿದ್ದರು. ನಂತರ ಬಾಲಕಿ ಮೃತದೇಹ ಹಲವು ದಿನಗಳ ಬಳಿಕ ಡಲ್ಲಾಸ್ ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು. 
ಉತ್ತಮ ಪೋಷಕರಿಗೆ ಮಗುವನ್ನು ದತ್ತು ಕೊಡಿಸುವಲ್ಲಿ ಅಮೆರಿಕ ದತ್ತು ಏಜೆನ್ಸಿ ವಿಫಲವಾಗಿದ್ದು ನಿರ್ಲಕ್ಷ್ಯ ಕಾರಣ ಅಮೆರಕ ದತ್ತು ಏಜೆನ್ಸಿಯನ್ನು ರದ್ದು ಪಡಿಸಲಾಗಿದೆ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ. 
ಈ ಬಗ್ಗೆ ಕೇಂದ್ರ ಸರ್ಕಾರ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದು ಅಮೆರಿಕ ದತ್ತು ಏಜೆನ್ಸಿಯನ್ನು ರದ್ದು ಪಡಿಸಿರುವುದಾಗಿ ತಿಳಿಸಿದೆ. 
ಶೆರಿನ್ ಮ್ಯಾಥ್ಯೂಸ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತು ಪಡೆದಿದ್ದ ವೆಸ್ಲಿ ಮ್ಯಾಥ್ಯೂಸ್ ಮತ್ತು ಸಿನಿ ಮ್ಯಾಥ್ಯೂಸ್ ರನ್ನು ಬಂಧಿಸಲಾಗಿದೆ. ಬಾಲಕಿಯ ದತ್ತು ತಂದೆ 37 ವರ್ಷದ ವೆಸ್ಲಿ ವಿರುದ್ಧ ಮಗುವಿನ ಸಾವಿಗೆ ಕಾರಣವಾದ ಆರೋಪವನ್ನು ಹೊರಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com